ರಂಗಭೂಮಿಯಲ್ಲಿ ನಟಿಯಾಗಿ, ವಿನ್ಯಾಸಗಾರ್ತಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡ ಅಮೃತಾ ರಕ್ಷಿದಿ ಅವರ ಜೀವನಾನುಭವಗಳನ್ನು ಅವರ ಈ ಆತ್ಮಕತೆ ’ಒಂಟಿ ಮನೆಯ ಪುಟಾಣಿ’ ಪುಸ್ತಕ ಒಳಗೊಂಡಿದೆ.
ತಮ್ಮ ಬಾಲ್ಯದ ದಿನಗಳಿಂದಲೇ ಪ್ಯಾರಾನಾಯ್ಡ್, ಸ್ಕಿಝೋಫ್ರೇನಿಯಾ ಎಂಬ ಖಾಯಿಲೆಗಳಿಂದ ಬಳಲುತ್ತಿದ್ದ ಲೇಖಕಿ ಅಮೃತಾ ಅವರ ’ಅಮೃತಯಾನ’ ಪುಸ್ತಕ ಸುಮಾರು ಐದು ಸಂಪುಟಗಳಲ್ಲಿ ಅವರ ಅನುಭವ ಕಥನವನ್ನು ದಾಖಲಿಸಿದೆ. ಲೇಖಕಿಯ ನೆನಪಿನ ಶಕ್ತಿಯ ಅನುಭವ ಕಥನದಲ್ಲಿ ಈ ಕೃತಿಯೂ ಒಂದು. ಬದುಕಿನ ಅದಮ್ಯ ಆಸೆ, ಆಕಾಂಕ್ಷೆಗಳನ್ನು ತನ್ನ ಪುಟ್ಟ ಪ್ರಪಂಚದ ಬಚ್ಚಿಟ್ಟುಕೊಂಡ ನೂರಾರು ಕನಸುಗಳನ್ನು ಮುಕ್ತವಾಗಿ ಓದುಗರಿಗೆ ನೀಡಿದ್ದಾರೆ.
©2025 Book Brahma Private Limited.