ಗಣಿತಶಾಸ್ತ್ರಜ್ಞ ಪ್ರೊ. ಎಚ್.ಬಿ. ವಾಲೀಕಾರ ಅವರ ಕೃತಿ-ನಾನು, ನೀನು ಮತ್ತು ದೇವರು. ಸ್ವ-ವಿಶ್ಲೇಷಣಾತ್ಮಕ ವೈಚಾರಿಕ ಕೃತಿ ಎಂಬುದು ಉಪಶೀರ್ಷಿಕೆ. ಅನುಭವ ಕಥನ ಇಲ್ಲವೇ ಆತ್ಮಕಥನದ ಮಾದರಿಯಲ್ಲಿ ಲೇಖಕರು ತಮ್ಮ ಜೀವನಾನುಭವಗಳ ಮೇಲೆ ಕ್ಷ-ಕಿರಣ ಬೀರಿದ್ದು, ಅಧ್ಯಾತ್ಮಿಕ ಆಯಾಮಗಳ ಕುರಿತು, ಈ ಬರಹಗಳಲ್ಲಿ ತಮ್ಮ ಅಭಿಪ್ರಾಯದ ಸ್ಪರ್ಶ ನೀಡಿದ್ದಾರೆ.
ಪ್ರೊ. ಎಚ್.ಬಿ. ವಾಲೀಕಾರ ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಯರಗಲ್ಲ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಗಣಿತ ಶಾಸ್ತ್ರಜ್ಞರು. ಗಣಿತಶಾಸ್ತ್ರಕ್ಕೆ ಸಂಬಂಧಿಸಿ ಇವರು ಅನೇಕ ಕೃತಿಗಳನ್ನು ರಚಿಸಿದ್ದು, ಅವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ. ಕೃತಿಗಳು: ನಾನು ನೀನು ಮತ್ತು ದೇವರು: ಸ್ವ-ವಿಶ್ಲೇಷಣಾತ್ಮಕ ವೈಚಾರಿಕ ಕೃತಿ ...
READ MORE