ನಾ ಕಂಡ ನಮ್ಮವರು

Author : ಭಾರ್ಗವಿ ನಾರಾಯಣ

Pages 152

₹ 130.00




Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ರಂಗ ಕಲಾವಿದೆಯಾಗಿ, ನಟಿಯಾಗಿ,ಲೇಖಕಿಯಾಗಿ ಚಿರಪರಿಚಿತರಾಗಿರುವ ಭಾರ್ಗವಿ ನಾರಾಯಣ್ ಅವರ ಕೃತಿ ’ನಾ ಕಂಡ ನಮ್ಮವರು’.

ಈ ಕೃತಿಯು ಭಾರ್ಗವಿ ನಾರಾಯಣ್ ಅವರ ಕಲಾ ಬದುಕಿನನೊಳಗೆ ಹೊಕ್ಕಿದ ಮತ್ತು ತಮ್ಮ ತುಂಬು ಕುಟುಂಬದಲ್ಲಿ ಸೇರಿ ಹೋದ ಅಳಿದುಳಿದವರ  ಅನೇಕರ ವ್ಯಕ್ತಿಚಿತ್ರಗಳನ್ನು ತಮ್ಮದೇ ವಿಶಿಷ್ಟ ಅನುಭವದಲ್ಲಿ ನಿರೂಪಿಸಿದ್ದಾರೆ.

ಮಾವಯ್ಯ, ಕೆಲಸದ ಅಮ್ಮಯ್ಯಮ್ಮ, ಲಲಿತ, ಅತ್ತಿಗಮ್ಮ, ನಮ್ಮಣ್ಣ ಚಿಂತಾಮಣಿ, ನಮ್ಮ ಶೇಷಕ್ಕ , ನಾಗಮ್ಮ, ಎದುರುಮನೆ ಕಮಲಮ್ಮ, ಮೇಷ್ಟ್ರು-ಆನೂರು ಸೂರಿ(ಸೂರ್ಯನಾರಾಯಣ), ಪಾಪಚ್ಚಿ, ಡಾ. ಎಂ.ಆರ್‍ ಸ್ವಾಮಿ, ಕಮಲ, ಸಾವಿತ್ರಿ, ಪುರುಷೋತ್ತಮ,  ಹೀಗೆ ಇವರ ಆತ್ಮೀಯ ಕುಟುಂಬ ವಲಯದವರ ವ್ಯಕ್ತಿ  ಚಿತ್ರಣವನ್ನು ಓದುರೊಂದಿಗೆ ಹಂಚಿಕೊಂಡಿದ್ದಾರೆ.

About the Author

ಭಾರ್ಗವಿ ನಾರಾಯಣ
(04 February 1938 - 14 February 2022)

ಭಾರ್ಗವಿ ನಾರಾಯಣ ಅವರು ಇಂಗ್ಲಿಷ್ ಎಂ.ಎ. ಪದವಿ ಪಡೆದವರು.  ಇ.ಎಸ್.ಐ, ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ 31  ವರ್ಷಗಳ  ಕಾಲ  ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಾಲಕಲಾವಿದೆಯಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಇವರು ಕಿರುತೆರೆ-ಹಿರಿತೆರೆಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಹಲವಾರು ನಾಟಕಗಳನ್ನು ತಾವೇ ರಚಿಸಿ ಆಕಾಶವಾಣಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ಇವರು ಸಹಕಲಾವಿದರಾಗಿ ಅಭಿನಯಿಸಿರುವ ಪ್ರೊ. ಹುಚ್ಚುರಾಯ ಸಿನಿಮಾದ ಅಭಿನಯಕ್ಕೆ 1974 ರಲ್ಲಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಂದಿದೆ. ಹವ್ಯಾಸಿ ಬರಹಗಾರರಾಗಿರುವ ಇವರು  1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಲಭಿಸಿದೆ. 'ಕವಲೊಡೆದ ದಾರಿ' ಭಾಗ-2  ಧಾರಾವಾಹಿಗೆ ಅವರು ರಚಿಸಿದ ಕತೆ ...

READ MORE

Related Books