ಖ್ಯಾತ ಲೇಖಕಿ ವೀಣಾ ಬನ್ನಂಜೆ ಅವರ ಕೃತಿ-ಸೊನ್ನೆಯಿಂದ ಸಾವಿರದತನಕ. ಜೀವ ಬೆಳವಣಿಗೆಯ ಅನುಭವ ಕಥನ ಎಂಬುದು ಕೃತಿಯ ಉಪಶೀರ್ಷಿಕೆ. ಬದುಕಿನ ಸೂಕ್ಷ್ಮತೆಗಳನ್ನು ತಮ್ಮ ಒಳನೋಟದ ಮೂಲಕ ಸಾಕ್ಷಾತ್ಕರಿಸಿಕೊಳ್ಳುವ ಸಾಮರ್ಥ್ಯವನ್ನು ತಮ್ಮ ಸಾಹಿತ್ಯ ರಚನೆಯ ಮೂಲಕ ಸಾಬೀತು ಪಡಿಸಿದ ಲೇಖಕಿ, ಬೆಳವಣಿಗೆಯ ವಿವಿಧ ಹಂತದಲ್ಲಿಯ ಜೀವ ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ. ಅನುಭವ ಕಥನ ರೂಪದ ಈ ಕೃತಿಯು ಬದುಕಿನ ವಿಶ್ಲೇಷಣೆ ಮಾತ್ರವಲ್ಲ ಸೂಕ್ಷ್ಮ ಒಳನೋಟಗಳನ್ನು ನೀಡುತ್ತದೆ.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE