ನನ್ನನುಭವದ ಸೂಫಿ

Author : ನೂರ್‌ ಶ್ರೀಧರ್‌

Pages 280

₹ 200.00




Published by: ಲಂಕೇಶ್ ಪ್ರಕಾಶನ
Phone: 080-26676427

Synopsys

ಮಾರ್ಕ್ಸ್‌ವಾದಿ ಚಿಂತಕರಾಗಿರುವ ನೂರ್‌ ಶ್ರೀಧರ್‌ ಅವರು ರಚಿಸಿದ ಈ ಕೃತಿಯಲ್ಲಿ 20ಕ್ಕೂ ಹೆಚ್ಚು  ಲೇಖನಗಳಿವೆ. ಸಮಾಕಾಲೀನ ರಾಜಕೀಯದ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ. ಇವರು ನಕ್ಸಲ್ ಚಳುವಳಿಯಿಂದ ಪ್ರಭಾವಿತರಾಗಿ ನಾಡಿಗೆ ಕಾಲಿಟ್ಟವರು. ಈ ಸಂದರ್ಭದಲ್ಲಿ ಅವರು ಎದುರಿಸಿದ ವಿವಿಧ ಸವಾಲುಗಳನ್ನು ಕೃತಿಯಲ್ಲಿ ವಿವರಿಸಿದ್ದಾರೆ.  ಪುರೋಹಿತಶಾಹಿ ಮತ್ತು ವ್ಯವಸ್ಥೆ ಮತ್ತು ಪ್ರಭುತ್ವದ ವಿರುದ್ಧ ದಬ್ಬಾಳಿಕೆಯನ್ನು ಪ್ರಶ್ನಿಸುವುದು ಸೂಫಿತತ್ವದ ಮೂಲ ಗುಣವಾಗಿದೆ. ಪೊಲೀಸರ ಕ್ರೌರ್ಯ, ಪಾಪಿಗಳ ಸ್ನೇಹ, ಕಾಡಿನ ಸಂಗಾತಿಗಳ ನೆನಪು, ನೋವು, ನಕ್ಸಲ್ ಮಹಿಳಾ ಕಿಡಿಗಳ ಸಂಘರ್ಷಗಾಥೆಗಳನ್ನು ನೆನೆಯಲಾಗಿದೆ. 

About the Author

ನೂರ್‌ ಶ್ರೀಧರ್‌

ಸಕ್ರಿಯ ಸಾಮಾಜಿಕ ಕಾರ್ಯಕರ್ತ, ರಾಜಕೀಯ ಚಿಂತಕ, ಲೇಖಕ ನೂರ್ ಶ್ರೀಧರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಕಾಲೇಜು ದಿನಗಳಲ್ಲಿ ಎಡಪಂಥೀಯ ಚಿಂತನೆಗಳಿಂದ ಸ್ಪೂರ್ತಿ ಪಡೆದು, ಸಾಮಾಜಿಕ ಚಳವಳಿಯಲ್ಲಿ ತೊಡಗಿಕೊಂಡವರು. ನ್ಯಾಯಪಥ, ಸಂವಾದ ಒಳಗೊಂಡಂತೆ ಹಲವಾರು ಪತ್ರಿಕೆಗಳಲ್ಲಿ ಸಮಕಾಲೀನ ವಿಷಯಗಳ ಕುರಿತು ವಿಶ್ಲೇಷಣಾ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ ಹಾಗೂ ನನ್ನನುಭವದ ಸೂಫಿ.  ...

READ MORE

Related Books