ರೇಣುಕಾ ನಿಡಗುಂದಿ ಅವರ ಕೃತಿ-ದಿಲ್ಲಿ ಡೈರಿಯ ಪುಟಗಳು. ಮೂಲತಃ ಧಾರವಾಡದವರಾದ ಲೇಖಕಿಯು ಕಳೆದ ಮೂರು ದಶಕಗಳಿಂದ ದೆಹಲಿಯಲ್ಲಿದ್ದು, ತಾವು ಕಂಡ ದಿಲ್ಲಿ ಬದುಕಿನ ವಿವಿಧ ಚಿತ್ರಗಳನ್ನು ನೀಡಿದ್ದಾರೆ. ದಿಲ್ಲಿ ಎಂಬ ಊರು ಹೇಗೆ ತನ್ನನು ರೂಪಿಸಿತು, ಕ್ರಿಯಾಶೀಲ ಮತ್ತು ಸೃಜನಶೀಲಳನ್ನಾಗಿಸಿತು ಮತ್ತು ತನ್ನೆಲ್ಲ ಕನಸಿಗೆ ರಂಗು ತುಂಬಿ ಹೊಸ ಕನಸುಗಳನ್ನು ದಯಪಾಲಿಸಿತು ಎಂಬುದನ್ನುಆಪ್ತವಾಗಿ ಚಿತ್ರಿಸಿದ್ದಾರೆ. ಯಾವುದೇ ಚರಿತ್ರೆಯ ಪುಸ್ತಕಗಳಿಂದ ಎರವಲು ಪಡೆಯದೇ, ಲೇಖಕಿಯ ಅನುಭವದ ಮೂಸೆಯಿಂದ ಮೂಡಿದ ಚಿತ್ರಣಗಳು ಈ ಕೃತಿಯಲ್ಲಿವೆ. ಹೀಗಾಗಿ, ಕೃತಿಯಲ್ಲಿ ಸ್ವಂತಿಕೆ-ಗಟ್ಟಿತನವಿದೆ.
©2025 Book Brahma Private Limited.