ಜಯಶ್ರೀ ದೇಶಪಾಂಡೆ ತಮ್ಮ ಕುಟುಂಬದ ಕೆಲವು ನೆನಪುಗಳನ್ನು ಹಂಚಿಕೊಂಡಿರುವ ಕೃತಿ ಇದು. ಒಂದೆಡೆ ಆತ್ಮಕತೆಯ ಸ್ವರೂಪದಲ್ಲಿಯೂ, ಇನ್ನೊಂದೆಡೆ ಅನುಭವ ಕಥನದ ರೂಪದಲ್ಲಿಯೂ ಮತ್ತೊಂದೆಡೆ ಕಥಾ ಸಂಕಲನದಂತೆಯೂ ಕಾಣುವ ’ಮಾಯಿ ಕೆಂದಾಯಿ’ ಕರುಳು- ಬಳ್ಳಿ ಸಂಬಂಧವನ್ನು ರೂಪಕ ಭಾಷೆಯಲ್ಲಿ ಮಾತನಾಡಲು ತೊಡಗುತ್ತದೆ.
ಉತ್ತರ ಕರ್ನಾಟಕದ ಅದರಲ್ಲಿಯೂ ಧಾರವಾಡ ಸೀಮೆಯ ಕೌಟುಂಬಿಕ ವ್ಯವಸ್ಥೆಯನ್ನು ಅತ್ಯಂತ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಜಯಶ್ರೀ. ಅವರು ಸ್ವತಃ ಸೃಜನಶೀಲ ಲೇಖಕರೂ ಆಗಿರುವುರದಿಂದ ಇಲ್ಲಿನ ಅನುಭವ ಕಥನಗಳಿಗೆ ಸಣ್ಣ ಕತೆಗಳ ವಿಸ್ತಾರವೂ ದಕ್ಕಿದೆ.
©2024 Book Brahma Private Limited.