ಮುಸ್ಲಿಂ, ಇದು ದೈವ ಸೈನಿಕರ ಲೋಕ ಪುಸ್ತಕವು ಜಿಹಾದ್ ಕುರಿತಾಗಿನ ಅಚ್ಚರಿಯ ಸಂಗತಿಗಳನ್ನು ಅನಾವರಣಗೊಳಿಸುತ್ತದೆ. ದೈವ ಸೈನಿಕರು ಯಾವ ರೀತಿ ಧರ್ಮದ ಹೆಸರಿನಲ್ಲಿ ಈ ಪ್ರಪಂಚದಲ್ಲಿ ಭಯೋತ್ಪಾದನೆಯನ್ನು ಮಾಡುತ್ತಿದ್ದಾರೆ ಎಂಬ ಕುರಿತಾಗಿ ಈ ಪುಸ್ತಕದಲ್ಲಿ ಬರೆಯಲಾಗಿದೆ. ಅಮೇರಿಕಾದಂತಹ ಬಲಿಷ್ಟ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವಂತಹ ಧೈರ್ಯವನ್ನು ತೋರುವಷ್ಟು ಹುಂಬತನ ಬೆಳೆದುದರ ಕುರಿತು ಲೇಖಕರಾದ ರವಿ ಬೆಳಗೆರೆಯವರು ಈ ಪುಸ್ತಕದಲ್ಲಿ ಬರೆಯುತ್ತಾರೆ. ತಾವು ಖುದ್ದು ಭೇಟಿ ಕೊಟ್ಟು ನೋಡಿದಂತಹ ಮತ್ತು ತಿಳಿದುಕೊಂಡಂತಹ ವಿಷಯಗಳ ಕುರಿತು ಈ ಪುಸ್ತಕದಲ್ಲಿ ಬೆಳಗೆರೆಯವರು ಬರೆಯುತ್ತಾರೆ. ಯಾವ ರೀತಿ ಉಗ್ರರ ಪಡೆಯನ್ನು ಮಾರಣ ಹೋಮಕ್ಕೆ ಸಿದ್ದಪಡಿಸಲಾಗುತ್ತದೆ, ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ಬಿಸಿ ರಕ್ತದ ತರುಣರವರೆಗೂ ಎಲ್ಲರೂ ಯಾವ ರೀತಿ ಭಯೋತ್ಪಾದನೆಯ ಮೋಹಕ್ಕೆ ಒಳಗಾಗುತ್ತಾರೆ, ಅವರ ಮನಸ್ಥಿತಿಯನ್ನು ಯಾವ ರೀತಿ ನಿಯಂತ್ರಿಸಲಾಗುತ್ತದೆ ಎಂಬುದರ ವರ್ಣನೆ ಈ ಪುಸ್ತಕದಲ್ಲಿ ಓದಬಹುದು. ಭಯೋತ್ಪಾದಕರ ತರಭೇತಿ ಶಿಬಿರಗಳ ಕುರಿತು, ಅಲ್ಲಿ ಹದಿ ಹರೆಯದ ತರುಣರು ಪಡೆಯುವ ಶಸ್ತ್ರಾಸ್ತ ತರಭೇತಿಯ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ರವಿ ಬೆಳಗೆರೆಯವರು ನೀಡಿದ್ದಾರೆ. ಭಯೋತ್ಪಾದನೆಯ ಒಳ ಹೊರಗಿನ ವಿಷಯಗಳನ್ನು ಸರಳವಾಗಿ ಅರ್ಥೈಸುವ ರೀತಿಯಲ್ಲಿ ವಿವರಿಸಿದ್ದಾರೆ ಲೇಖಕರು.
©2025 Book Brahma Private Limited.