ಕುವೆಂಪು ಅವರ ಬರವಣಿಗೆಯ ಚಿತ್ರಕ ಶಕ್ತಿಯನ್ನು ’ಮಲೆನಾಡಿನ ಚಿತ್ರಗಳು’ ಪುಸ್ತಕದಲ್ಲಿ ಕಾಣಬಹುದು. ಮಲೆನಾಡಿನ ಸೊಬಗನ್ನು ವಿವರಿಸುವ -ಸೌಂದರ್ಯವನ್ನು ಚಿತ್ರಿಸುವ ಕವಿ ಕುವೆಂಪು ಅವರ ಬಾಲ್ಯದ ಅನುಭವಗಳನ್ನು ಈ ಪ್ರಬಂಧಗಳು ಒಳಗೊಂಡಿವೆ. ರಮ್ಯ-ಭೀಕರ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವ ಕುವೆಂಪು ಅವರ ಗದ್ಯದ ಮಾರ್ದವತೆಯ ಅನುಭವ ದೊರೆಯುತ್ತದೆ.
ಈ ಪುಸ್ತಕವು ಪುಟ್ಟಪ್ಪನವರು ಮಲೆನಾಡಿನ ಮಡಿಲಲ್ಲಿ ಇದ್ದ ಕುಪ್ಪಳಿ ಮನೆ, ಕವಿಶೈಲ, ನವಿಲುಕಲ್ಲು, ಮನೆಯ ದಕ್ಷಿಣಕ್ಕಿರುವ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗದಲ್ಲಿರುವ ಬೆಟ್ಟ ಹಾಗೂ ಪೂರ್ವಕ್ಕೆ ಹರಡಿ ನಿಂತಿರುವ ಅಡಿಕೆ ತೋಟಗಳ ವರ್ಣನೆಯನ್ನು ಸೊಗಸಾಗಿ ನೀಡುತ್ತಾರೆ. ಸೊಗಸಾದ ವರ್ಣನೆಯು ಓದುಗನ ಮನಪಟಲದಲ್ಲಿ ಚಿತ್ರಗಳಾಗಿ ಮೂಡುತ್ತವೆ ನಿಸರ್ಗ ಪ್ರೇಮಿಗಳಿಗೆ ಪ್ರಿಯವಾಗುವ ಈ ಕೃತಿಯು ಲಲಿತ ಪ್ರಬಂಧ ಮಾದರಿಯ ಅತ್ಯುತ್ತಮ ಕೃತಿ ಎಂದು ಹೇಳಬಹುದು.
ಮಲೆನಾಡಿಗೆ ಬಾ, ಹಾಸ್ಯದ ಚಟಾಕಿ, ಕಾಡಿನಲ್ಲಿ ಕಳೆದ ಒಂದಿರುಳು, ಅಜ್ಜಯ್ಯನ ಅಭ್ಯಂಜನ, ಬಂದನಾ ಹುಲಿರಾಯನು, ಪುಟ್ಟಾಚಾರಿಯ ಕಾಡುಕೋಳಿ, ಮನೆಯ ಶಾಲೆಯ ಐಗಳ ಮಾಲೆ, ತೋಟದಾಚೆಯ ಭೂತ, ಅಣ್ಣಪ್ಪನ ರೇಷ್ಮೆ ಕಾಯಿಲೆ, ಮಲೆನಾಡಿನ ಗೋಪಾಲಕರು, ಜೇನು ಬೇಟೆ, ಕತೆಗಾರ ಮಂಜಣ್ಣ, ರಾಮರಾವಣರ ಯುದ್ಧ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕತೆಗಳನ್ನು ಕಟ್ಟಲಾಗಿದೆ.
©2024 Book Brahma Private Limited.