ವೃಷಭೇಂದ್ರಸ್ವಾಮಿ ಅವರು ಕುವೆಂಪು ಅವರು ಶಿಷ್ಯರಲ್ಲಿ ಒಬ್ಬರು. ಪುಟ್ಟಪ್ಪನವರು ತರಗತಿಗಳಲ್ಲಿ ಪಾಠ ಮಾಡುತ್ತಿದ್ದನ್ನು ಕೇಳಿ ಅದನ್ನು ದಾಖಲಿಸಿದವರಲ್ಲಿ ವೃಷಭೇಂದ್ರಸ್ವಾಮಿ ಪ್ರಮುಖರು. ಕುವೆಂಪು ಅವರ ಪಾಠ-ಪ್ರವಚನ, ನಡವಳಿಕೆಯನ್ನು ಅವರ ವಿದ್ಯಾರ್ಥಿಯಾಗಿದ್ದ ವೃಷಭೇಂದ್ರಸ್ವಾಮಿ ಅವರು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದರು. ತಮ್ಮ ದಿನಚರಿಯನ್ನು ಆಧಾರವಾಗಿಟ್ಟುಕೊಂಡು ವೃಷಭೇಂದ್ರಸ್ವಾಮಿ ಅವರು ಕುವೆಂಪು ಅವರ ಕುರಿತಾದ ಈ ಕೃತಿಯನ್ನು ರಚಿಸಿದ್ದಾರೆ. ವಿದ್ಯಾರ್ಥಿಯೊಬ್ಬ ತನ್ನ ಗುರುವಿಗೆ ಸಲ್ಲಿಸಿದ ವಿಭಿನ್ನ ಗೌರವವಿದು.
ವಿದ್ವಾಂಸ ವೃಷಭೇಂದ್ರ ಸ್ವಾಮಿ ಅವರು ಜನಿಸಿದ್ದು 1928ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ (ತಾ) ಎಂ.ಬಿ. ಅಯ್ಯನಹಳ್ಳಿಯಲ್ಲಿ. ಸೊನ್ನದ ಮಠದ ಮನೆತನದಲ್ಲಿ ಹುಟ್ಟಿದ ಅವರು ಕಾನಾಮಡುಗು, ಕೊಟ್ಟೂರುಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಆನಂತರ ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು. ಡಾ. ಆರ್. ಸಿ. ಹಿರೇಮಠ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯದಲ್ಲಿ ’ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭುದೇವ’ ಎಂಬ ವಿಷಯದ ಮೇಲೆ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್.ಡಿ ಪಡೆದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ವೀರಶೈವ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು 1961ರಿಂದ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ...
READ MORE