ಜೈಲೆಂಬ ಲೋಕದಲ್ಲಿ

Author : ಕುಮಾರ್ ಸಮತಳ

Pages 130

₹ 75.00




Year of Publication: 2009
Published by: ಲಂಕೇಶ್ ಪ್ರಕಾಶನ
Address: ಲಂಕೇಶ್ ಪ್ರಕಾಶನ, ಬಸವನಗುಡಿ, ಬೆಂಗಳೂರು

Synopsys

ಅಂಡಮಾನ್ ನಿಕೋಬಾರ್‌ನಲ್ಲಿದ್ದ ಜೈಲು ದೇಶದಲ್ಲಿಯೇ ಅತ್ಯಂತ ಕ್ರೂರ ಶಿಕ್ಷೆ ವಿಧಿಸಲಾಗುತ್ತಿದ್ದ ಜೈಲಂತೆ. ಆ ಜೈಲಿನಲ್ಲಿದ್ದ ಖೈದಿಗಳಿಗೆ ಸೂರ್ಯನ ಬೆಳಕೆ ಕಾಣಿಸುತ್ತಿರಲಿಲ್ಲವಂತೆ. ಕಗ್ಗತ್ತಲ ಜೈಲಾಗಿತ್ತಂತೆ. ಇಂತಹ ನೂರಾರು ವಿಷಯಗಳನ್ನು ನಾವು ಕೇಳಿರುತ್ತೇವೆ. ಕರ್ನಾಟಕದಲ್ಲಿರುವ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ದೇಶದ ಹಲವಾರು ಜೈಲುಗಳ ಬಗ್ಗೆ ಅಂತೆ ಕಂತೆಗಳ ಮಹಾಪೂರವೇ ಹರಿದುಬರುತ್ತದೆ. ಇಂದಿನ ರಾಜಕಾರಣಿಗಳಿಗೆ ಸೆರೆಮನೆವಾಸ ಎಂಬುದು ತೀರಾ ಸಾಮಾನ್ಯ ಸಂಗತಿಯಾಗಿರುವಾಗ ಜೈಲು ಕೂಡ ಮನೆ ಇದ್ದಂತೆ ಇರುತ್ತದೆ ಎನ್ನುತ್ತವೆ ಮಾಧ್ಯಮಗಳು. 

ಇದಕ್ಕೆ ತದ್ವಿರುದ್ಧ ಎನ್ನುವಂತಿರುವ ಜೈಲುಗಳ ಬಗ್ಗೆ ತಮಗಾದ ಅನುಭವವನ್ನು ಲೇಖಕರು ವಿವರಿಸಿದ್ದಾರೆ. ತಪ್ಪೇ ಮಾಡದ ನಿರಪರಾಧಿಗಳು, ಸಣ್ಣ ಪುಟ್ಟ ತಪ್ಪಿನಿಂದಾಗಿ ಹಲವಾರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ಬಡಜನರು, ಅವ್ಯವಸ್ಥೆಯಿಂದ ಕೂಡಿದ ಕಾರಾಗೃಹ ವ್ಯವಸ್ಥೆ ಎಲ್ಲವನ್ನು ಎಳೆಎಳೆಯಾಗಿ ಲೇಖಕರು ಬಿಡಿಸಿಟ್ಟಿದ್ದಾರೆ. 

About the Author

ಕುಮಾರ್ ಸಮತಳ

ಬರಹಗಾರ, ಹೋರಾಟಗಾರ ಕುಮಾರ್ ಸಮತಳ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಸಮತಳ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದ ಎಡಪಂಥೀಯ ಚಳವಳಿಯಲ್ಲಿ ಆಸಕ್ತಿ ಇದ್ದ ಇವರು ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬೆಳ್ಳಿಚುಕ್ಕಿ ಬುಕ್‌ ಟ್ರಸ್ಟ್‌ ಪುಸ್ತಕ ಮಾರಾಟ ಮಳಿೆಗೆ ಹಾಗೂ ಗ್ರಂಥಾಲಯವನ್ನು ಕೆಲಕಾಲ ನಡೆಸಿದ್ದರು.  ಪ್ರಸ್ತುತ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಲ್ಲಿ ಚಟುವಟಿಕೆಯಿಂದಿದ್ದಾರೆ. ಸುಮಾರು ೩ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿರುವ ಇವರು ಜೈಲಿನ ಅನುಭವದ ಬಗ್ಗೆ ಜೈಲೆಂಬ ಲೋಕದಲ್ಲಿ ಕೃತಿ ರಚಿಸಿದ್ದಾರೆ. ...

READ MORE

Related Books