ಅಪ್ಪ ಮತ್ತು ಮಣ್ಣು

Author : ಶಶಿಕಲಾ ವಸ್ತ್ರದ

Pages 100

Synopsys

ಪ್ರಸಿದ್ಧ ಕವಯತ್ರಿ ಶಶಿಕಲಾ ವೀರಯ್ಯಸ್ವಾಮಿ ಅವರ ’ಅಪ್ಪ ಮತ್ತು ಮಣ್ಣು’ ಒಂದು ಬಗೆಯ ಆತ್ಮಕಥನ. ತನ್ನ ತಂದೆಯ ಬದುಕಿನ ಕಡೆಯ ದಿನದ ವಿವರಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಶಶಿಕಲಾ. 

ಪುಸ್ತಕದಲ್ಲಿ ವಿವರಿಸಿರುವಂತೆ ’ಅಪ್ಪನ ಸಾವಿನ ಸನ್ನಿಧಿಯಲ್ಲಿ ನಿಂತ ಮಗಳು ಅಪ್ಪನ ತೂಕದ ಬದುಕನ್ನು ಗಾಂಭೀರ್ಯದ ವ್ಯಕ್ತಿತ್ವವನ್ನು ಶ್ರಮ ತ್ಯಾಗದ ಜೀವನವನ್ನು ಸರಳ ಸಹಜ ಆಪ್ತವಾದ ರೀತಿಯಲ್ಲಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಪ್ಪನ ಶಿಸ್ತಿನ ಜೀವನ ಮಕ್ಕಳೆಡೆಗಿನ ಕಕ್ಕುಲತೆ ಬೆಳೆಸುವ ಕಾಳಜಿ ಜೋಕಿ ಮಾಡುವ ಪ್ರೀತಿಯ ಶಶಿಕಲಾ ಅಮ್ಮನವರು ಬಹು ಆರ್ದ್ರತೆಯಿಂದ ಬರೆದಿದ್ದಾರೆ. ಶಾಲೆ ಕೆಲಸ, ಮನೆ ಕೆಲಸ, ಹೊಲದಿ ಬಾವಿ ತೋಡಿಸಿ ಗಿಡ ಹಾಕಿ, ನೀರು ಸೇದಿ ಹಾಕುವ ನಿತ್ಯ ಕೆಲಸಗಳು ಹತ್ತೆಂಟು ಇದ್ದರು, ಸುಸ್ತು ತೋರದ ಅಪ್ಪ ಬೆರಗು ಮೂಡಿಸುತ್ತಾನೆ’. 

About the Author

ಶಶಿಕಲಾ ವಸ್ತ್ರದ
(23 January 1948)

ಕವಯತ್ರಿ ಶಶಿಕಲಾ ವಸ್ತ್ರದ 1948 ಜನವರಿ 23ರಂದು ಜನಿಸಿದರು. ವಿಜಯಪುರ ಜಿಲ್ಲೆ ಸಿಂದಗಿ ಇವರ ಹುಟ್ಟೂರು. ತಾಯಿ ಅನ್ನಪೂರ್ಣದೇವಿ. ತಂದೆ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಪನ್ಯಾಸಕಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ.  ಕಥೆ, ಕವನ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಗುಬ್ಬಿಮನೆ, ಪ್ರಶ್ನೆ, ಜೀವ ಸಾವುಗಳ ನಡುವೆ, ಹೆಂಗ ಹೇಳಲಿ ಗೆಳತಿ (ಕವನ ಸಂಕಲನ) ಶ್ರೀ ಗುರುಸಿದ್ದೇಶ್ವರ ಚರಿತ್ರೆ (ಜೀವನ ಚರಿತ್ರೆ), ಅಪ್ಪ ಮತ್ತು ಮಣ್ಣು (ಅನುಭವ ಕಥನ), ಸಂವೇದನೆ, ಪ್ರಣಯಿನಿ, ಸಮೂಹ(ಸಂಪಾದನೆ), ...

READ MORE

Related Books