ದೇಶದಲ್ಲಿ ಸಂಚಲನವನ್ನು ಉಂಟು ಮಾಡಿದ್ದ ಹತ್ಯೆ ಎಂದರೆ ಅದು ಆರುಷಿ ತಲ್ವಾರ್ ಕೊಲೆ. 9 ವರ್ಷಗಳ ವಿಚಾರಣೆಯ ನಂತರ ಈ ಪ್ರಕರಣಕ್ಕೆ ಕೋರ್ಟ್ ತೀರ್ಪು ನೀಡಿತು. 12 ಅಕ್ಟೋಬರ್ 2017ರಂದು ಕೋರ್ಟ್ ನೀಡಿದ ತೀರ್ಪಿನಲ್ಲಿ ಪ್ರಬಲ ಸಾಕ್ಷ್ಯಾಧಾರಗಳ ಕೊರತೆ ಇದ್ದ ಕಾರಣ ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಈ ತೀರ್ಪು ಬರುವವರೆಗೂ, ಕೊಲೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಹಲವು ಬದಲಾವಣೆಗಳು ನಡೆದವು. ಸಿಬಿಐ ಈ ಕೇಸಿನ ತನಿಖೆ ನಡೆಸಿತು. ಸಿಬಿಐ ನಡೆಸಿದ ತನಿಖೆ, ಕೋರ್ಟ್‍ನಲ್ಲಿ ನಡೆದ ವಾದ ಪ್ರತಿವಾದ, ತಿರುಚಲಾದ ಸಾಕ್ಷ್ಯಾಧಾರಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಆರುಷಿ ತಲ್ವಾರ್ ಜೊತೆಗೆ ನಡೆದ ಇನ್ನೊಂದು ಕೊಲೆಯ ಕುರಿತ ವಿಚಾರಣೆಯಲ್ಲಿ ಆದಂತಹ ಎಡವಟ್ಟುಗಳ ಕುರಿತಾಗಿ ಕೂಡ ಿಲ್ಲಿ ವಿವರಿಸಲಾಗಿದೆ. ಕೊಲೆಗೆ ಕಾರಣವಾಗಬಲ್ಲ ಅಂಶಗಳು, ಕೊಲೆಗಾರರಲ್ಲಿ ಇರಬಹುದಾದಂತಹ ಮನಸ್ಥಿತಿ, ಕೊಲೆಯ ನಂತರ ಆದ ಘಟನೆಗಳ ಕುರಿತು ಸವಿವರವಾಗಿ ವಿಶ್ಲೇಷಣೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸಿಬಿಐ ನೀಡಿದ ವರದಿ, ಕೋರ್ಟ್ ತೀರ್ಪು ಹಾಗೂ ಇತರೆ ಮೂಲಗಳಿಂದ ವಸ್ತು ವಿಷಯವನ್ನು ಸಂಗ್ರಹಿಸಿ ಬರೆದಂತಹ ಪುಸ್ತಕ ಇದು.
©2024 Book Brahma Private Limited.