ಲೇಖಕರಾದ ಪ್ರಶಾಂತ್ ಬೀಚಿಯವರ ಕೃತಿ ’ ಕಿಲಿಮಂಜಾರೋ’.
ಆಫ್ರಿಕಾ ನಿವಾಸಿಯಾದ ಪ್ರಶಾಂತ್ ಬೀಚಿಯವರ ಅನುಭವ ಕತೆಗಳ ನಿರೂಪಣ ಶೈಲಿಯನ್ನು ಇಲ್ಲಿರುವ ಬರಹಗಳು ಹೊತ್ತಿವೆ. ಆಫ್ರಿಕಾದ ಚಳಿ, ಬಿಸಿಲುಗಳ ಹವಾಮಾನ ವೈಪರೀತ್ಯಗಳನ್ನು ಗಮನಿಸಿ,,ಅನುಭವ ಕಥನದ ರೀತಿ ಓದುಗರೊಂದಿಗೆ ಮಾತುಕತೆಯ ಮೂಲಕ ಲೇಖಕರು ಹಂಚಿಕೊಂಡಿದ್ದಾರೆ ಎನ್ನಬಹುದು.
ಸೂರ್ಯ ಕಾಣದಿರುವ , ಮತ್ತು ಬಿಸಿಲು ಬೀಳದಿರುವ ಕೆಲವು ಪ್ರದೇಶಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಲೇಖಕರು ಕಂಡ ತಾನ್ಜಾನಿಯಾ ಪ್ರದೇಶದ ಬಗ್ಗೆ ವಿವರವಾಗಿ ಈ ಕೃತಿಯಲ್ಲಿ ತಿಳಿಸಿದ್ಧಾರೆ.
ಲೇಖಕ ಪ್ರಶಾಂತ್ ಬೀಚಿ ಅವರ ಪೂರ್ಣ ಹೆಸರು- ಪ್ರಶಾಂತ ಬೀರೂರು ಚಿಕ್ಕಣ್ಣ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಬೀರೂರು, ಬೆಂಗಳೂರು ಮತ್ತು ಶಿವಮೊಗ್ಗ ದಲ್ಲಿ ವಿದ್ಯಾಭ್ಯಾಸ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ನಲ್ಲಿ ಡಿಪ್ಲೊಮಾ ಪದವೀಧರರು. ಬೆಂಗಳೂರು, ತಾನ್ಜಾನಿಯಾ (ಪೂರ್ವ ಆಪ್ರಿಕಾ), ಯೂಕೆ ಯಲ್ಲಿ ಕಾರ್ಯ ನಿರ್ವಹಿಸಿ ಸದ್ಯಕ್ಕೆ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದ ಲೇಖನಗಳು, ಕಥೆ-ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಅಂತಾರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಲೇರಿಯೊಂಕ (ಅನುವಾದಿತ ಕಾದಂಬರಿ), ಈ ಕೃತಿಗೆ ವಸುಧೇವ ಭೂಪಾಲಂ, ಪರಮೇಶ್ವರ ಭಟ್ಟ ಹಾಗು ಬೇಂದ್ರೆ ಪ್ರಶಸ್ತಿ ಲಭಿಸಿದೆ. ಕಿಲಿಮಂಜಾರೋ, ತಾಜಾ ತಾನ್ಜಾನಿಯಾ ಎಂಬ ಅಡಿ ಬರಹದೊಂದಿಗಿರುವ ಈ ...
READ MORE