ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಿ. ಬಿ. ಅಶೋಕಕುಮಾರ ಅವರ ಕೃತಿ-ಪೊಲೀಸ್ ವ್ಹಿಸಲ್ ಪೊಲೀಸ್ ವ್ಯವಸ್ಥೆಯು ಸಮಾಜದ ಆರೋಗ್ಯ ಕಾಯ್ದುಕೊಳ್ಳಲು ಇದ್ದು, ಅದರ ಎಚ್ಚರಿಕೆಯು ಮನುಷ್ಯನ ವರ್ತನೆಗಳನ್ನು ನಿಯಮಕ್ಕೆ ಒಳಪಡಿಸುತ್ತದೆ. ಲೇಖಕರು ಪೊಲೀಸ್ ನಿಯಮಗಳನ್ನು ಪರಿಪಾಲಿಸುತ್ತಿರುವಾಗ ಬಂದ ಅಡೆತಡೆಗಳು, ಅವುಗಳನ್ನು ಎದುರಿಸಿದ ರೀತಿ ಇತ್ಯಾದಿ ಕುರಿತು ತಮ್ಮ ವೃತ್ತಿ ಅನುಭವವನ್ನು ದಾಖಲಿಸಿದ್ದಾರೆ. ಪೊಲೀಸ್ ವ್ಹಿಸಲ್ ಎಂದರೆ ನಿಯಮಗಳು. ತಪ್ಪಿದರೆ ಶಿಕ್ಷೆ ಖಂಡಿತ ಎಂಬ ಪೊಲೀಸ್ ವ್ಯವಸ್ಥೆಯ ಘನತೆ-ಗೌರವಗಳನ್ನು ಇಲ್ಲಿ ವಿವರಿಸಿದ್ದಾರೆ.
.ಸಹಾಯಕ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಬಿ. ಅಶೋಕಕುಮಾರ ಅವರು ಟೈಗರ್ ಅಶೋಕಕುಮಾರ್ ಎಂದೇ ಖ್ಯಾತಿ. ಬೆಂಗಳೂರಿನಲ್ಲಿ (1983) ಸರಗಳ್ಳರ ಹಾವಳಿ ಮಟ್ಟಹಾಕಲು ರಚಿಸಿದ್ದ ಆಪರೇಷನ್ ಟೈಗರ್’ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರು ಅವರಿಗೆ ನೀಡಿದ ಬಿರುದು -ಟೈಗರ್. ವೃತ್ತಿಯಲ್ಲಿಯ ಈ ಸಾಹಸ-ಧೈರ್ಯದ ಹಿನ್ನೆಲೆಯಲ್ಲಿ ಹಲವು ಚಲನಚಿತ್ರಗಳು ತೆರೆ ಕಂಡವು. ಆ ಪೈಕಿ, ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು.. ಕಾರ್ಯದಕ್ಷತೆಗೆ ಹೆಸರಾಗಿದ್ದ ಅಶೋಕಕುಮಾರ್, ನರಹಂತಕ ವೀರಪ್ಪನ್ ಹಿಡಿಯಲು ವಿಶೇಷ ತನಿಖಾ ದಳದೊಂದಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗುವ ಮುನ್ನ ಪತ್ನಿಗೆ ...
READ MORE