‘ಅರಿವಿನ ಆಡುಂಬೊಲ’ ಹೆಚ್.ವೈ.ಶಾರದಾ ಪ್ರಸಾದ್ ಅವರು ರಚಿಸಿರುವ ಕೃತಿ. ಇದು ಕ್ವಿಟ್ ಇಂಡಿಯಾ ಸೆರೆಮನೆಯ ದಿನಚರಿ ಆಗಿದೆ. ಇಲ್ಲಿ ಸೆರೆಮನೆ ದಿನಚರಿ, ಅನುಬಂಧ -: ಟಿಪ್ಪಣಿಗಳು, ಅನುಬಂಧ 2ರಲ್ಲಿ ಹೆಚ್.ವೈ.ಎಸ್. ಅವರ ಕೈಬರವಣಿಗೆಯ ತದ್ರೂಪ ಪ್ರತಿ, ಅನುಬಂಧ 3ರಲ್ಲಿ- ಭಾವಚಿತ್ರಗಳು, ಅನುಬಂಧ 4ರಲ್ಲಿ ಸೆರೆಮನೆಯಿಂದ ತಂದೆಗೆ ಬರೆದ ಪತ್ರ, ಹಾಗೂ ಅನುಬಂಧ 5ರಲ್ಲಿ ಮಲ್ಲಜ್ಜನ ಪ್ರಸಂಗ ಎಂಬ ಲೇಖನಗಳು ಸಂಕಲನಗೊಂಡಿವೆ.
ಎಚ್. ವೈ. ಶಾರದಾ ಪ್ರಸಾದ್ ಮೂಲತಃ ಬೆಂಗಳೂರಿನವರು. ಪೂರ್ಣ ಹೆಸರು ಹೊಳೆನರಸೀಪುರ ಯೋಗಾನರಸಿಂಹ ಶಾರದಾ ಪ್ರಸಾದ್. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿಯವರಿಗೆ ಮಾಧ್ಯಮ ಸಲಹೆಗಾರರಾಗಿ, ಸೈ ಎನಿಸಿಕೊಂಡಿದ್ದ ಮೇಧಾವಿ, ಸಮರ್ಥ ಕನ್ನಡಿಗರು. ತಂದೆ ಎಚ್. ಯೋಗನರಸಿಂಹ ಅಧ್ಯಾಪಕರಾಗಿದ್ದರು ಜೊತೆಗೆ, ಸಂಗೀತ ಹಾಗೂ ಸಂಸ್ಕೃತದಲ್ಲಿ ವಿದ್ವಾಂಸರು. ಶಾರದಾ ಪ್ರಸಾದ್ ಅವರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವೆಲ್ಲಾ ಮೈಸೂರುನಗರದಲ್ಲಿ ಪೂರ್ಣಗೊಳಿಸಿದರುಖ್ಯಾತ ಕವಿ ಗೋಪಾಲಕೃಷ್ಣ ಅಡಿಗ, ಸಾಹಿತಿ-ಶಿಕ್ಷಣತಜ್ಞ ಪ್ರೊ.ಸಿ.ಡಿ. ನರಸಿಂಹಯ್ಯ, ಲಲಿತ ಪ್ರಬಂಧಕಾರ ಎ.ಎನ್. ಮೂರ್ತಿರಾವ್ ಹಾಗೂ ಕವಿ ಎ.ಕೆ. ರಾಮಾನುಜನ್ ಮುಂತಾದವರು ಶಾರದಾ ಪ್ರಸಾದ್ ಅವರ ಸಹಪಾಠಿಗಳು. ಸಾಹಿತ್ಯಕ್ಷೇತ್ರಕ್ಕೆ ಮಹತ್ವದ ಕೊಡುಗೆ ...
READ MORE