ಭಾರತೀಯ ವಾಯುಸೇನೆಯಲ್ಲಿ ವಾಯುಸೈನಿಕರಾಗಿ ಸೇವೆಗೆ ತೊಡಗಿದ ಸುದರ್ಶನ್, ದೃಢ ಸಂಕಲ್ಪ ಮತ್ತು ತ್ರಿವಿಕ್ರಮ ಛಲದಿಂದ ವಾಯುಸೇನೆಯ ಯಶಸ್ವೀ ವೈಮಾನಿಕರಾಗಿ ಹೆಸರು ಮಾಡಿದ್ದು ನಮ್ಮ ನಾಡಿಗೇ ಹೆಮ್ಮೆಯ ವಿಷಯ. ಈ ಎಲ್ಲಾ ಬಹಿರಂಗದ ನಡುವೆ ಅವರ ಅಂತರಂಗದಲ್ಲಿ ಕನ್ನಡ ಮತ್ತು ಸಾಹಿತ್ಯದ ಒಲವು ಜೀವಂತ ಝರಿಯಾಗಿತ್ತು. ವಾಯುಸೇನೆಯಿಂದ ನಿವೃತ್ತರಾದ ಮೇಲೆ ಇಂಡಿಗೋ ವಾಯುಯಾನ ಸಂಸ್ಥೆಯಲ್ಲಿ ವೈಮಾನಿಕರಾದ ಶ್ರೀಯುತರು ಜೊತೆಯಲ್ಲಿಯೇ ಸಾಹಿತ್ಯ ರಚನೆಯಲ್ಲಿಯೂ ಸಹಾ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರಸ್ತುತ ಕೃತಿ 'ನಭ ಸ್ಪಶಂ ದೀಪ್ತಂ, ಗಂಗೂರಿನಿಂದ ಗಗನಕ್ಕೆ” ಅವರ ವಾಯುಸೇನೆಯ ಶಿಕ್ಷಣದ ಮತ್ತು ರೋಚಕ ಅನುಭವಗಳ ಅತ್ಯಾಕರ್ಷಕ ನಿರೂಪಣೆ, ಸುದರ್ಶನರು ಈಗ ನನ್ನ ಅಭಿಮಾನದ ಕಿರಿಯ ಮಿತ್ರರು ಎಂದು ಎಚ್.ಎಸ್. ವೆಂಕಟೇಶಮೂರ್ತಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.