ಸತ್ಯಘಟನೆಗಳಿಗೆ ಒಂದಷ್ಟು ಕಲ್ಪನೆಗಳನ್ನು ಬೆರೆಸಿ ಬರೆದ ಲೇಖನಗಳ ಗುಚ್ಛ. ಪದವಿ ಓದುತ್ತಿದ್ದಾಗ ಅಡರಿದ ವೈರಾಗ್ಯ. ಸನ್ಯಾಸಿಯಾಗಲೆಂದು ಸ್ವಾಮೀಜಿಯೊಬ್ಬರನ್ನು ಹುಡುಕಿ ಹೊರಟ ಲೇಖಕರನ್ನು ಶಿಷ್ಯನನ್ನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ಬುದ್ದಿ ಹೇಳಿ ಮನೆಗೆ ಕಳುಹಿಸುತ್ತಾರೆ. ಅಲ್ಲಿಯ ನಂತರದ 10 ವರ್ಷಗಳ ಲೌಕಿಕ ಬದುಕಿನ ಜೀವನ ಪ್ರೀತಿಯಬರೆಹಗಳಿವು.
ಪ್ರೇಮ ಕಥೆ. ಪ್ರವಾಸ ಕಥನ. ಉಪನ್ಯಾಸಕನ ಅನುಭವ ಹೀಗೆ ವಿವಿಧ ಬರೆಹಗಳ ಸಂಕೀರ್ಣ ಕೃತಿ.
ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದವರು. ತಂದೆ ರಾಮಚಂದ್ರ ಕಾಮತ್. ತಾಯಿ ಗಾಯತ್ರಿ ಕಾಮತ್. ವೃತ್ತಿಯಲ್ಲಿ ಪತ್ರಿಕೋದ್ಯಮ ಉಪನ್ಯಾಸಕರು. ಪ್ರವಾಸ, ಬರೆವಣಿಗೆ ಹವ್ಯಾಸ. ಸಾಮಾಹಿಕ ಜಾಲತಾಣಗಳನ್ನು ಬಳಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ. ಒಂದಷ್ಟು ಓದುಗ ಯುವಕರು ಸೇರಿಕೊಂಡು ಆರಂಭಿಸಿದ್ದ ಬಿಳಿಕಲ್ಲು ಪ್ರಕಾಶನದ ಮೂಲಕ ಪುಸ್ತಕಗಳ ಪ್ರಕಟಣೆ. ಹೊಸ ಓದುಗರನ್ನು ಸೃಷ್ಟಿಸುವ, ತಲುಪುವ ಆಸಕ್ತಿ. ...
READ MORE