ಪಾಕಿಸ್ತಾನದ ನೆಲದಲ್ಲಿ

Author : ಶೂದ್ರ ಶ್ರೀನಿವಾಸ್

Pages 80

₹ 60.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

 

ಸ್ವಾತಂತ್ಯ್ರ, ಪ್ರೀತಿ, ಬಾಂಧ್ಯವದ ಹೂರಣವಿರುವ ಕೃತಿ ಪಾಕಿಸ್ತಾನದ ನೆಲದಲ್ಲಿ. ಸ್ವಾತಂತ್ರ್ಯಕ್ಕಾಗಿ - ಜೊತೆ ಜೊತೆಯಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿ, ಧರ್ಮದ ಮತ್ತು - ಪ್ರಾಂತ್ಯದ ಆಧಾರದ ಮೇಲೆ ಇಬ್ಬಾಗವಾಗಿ, ಅಸ್ತಿತ್ವಕ್ಕಾಗಿ ಅನೇಕ ಯುದ್ದಗಳನ್ನು ಮಾಡಿವೆ. ಇವೆಲ್ಲಾ ಏನೇ ಇದ್ದರೂ ಪಾಕಿಸ್ತಾನದ ನೆಲದಲ್ಲಿರುವ ಭಾರತೀಯರ ಬದುಕು, ಸ್ನೇಹ, ಪ್ರೀತಿ, ಬಾಂಧವ್ಯದ ಕುರಿತು ಈ ಕೃತಿಯು ವಿವರಿಸುತ್ತದೆ. ’ಪಾಕಿಸ್ತಾನದ ನೆಲದಲ್ಲಿ’ ಶೀರ್ಷಿಕೆ ಓದುತ್ತಿದ್ದಂತೆ ನಿಮ್ಮಲ್ಲಿ ಪ್ರಶ್ನೆ ಸಾವಿರಾರು ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯುವ ಕುತೂಹಲವಿದ್ದರೆ ತಪ್ಪದೇ ಓದಿ ಪಾಕಿಸ್ತಾನದ ನೆಲದಲ್ಲಿ. 

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books