‘ಐ-witness’ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿರುವ ಎಸ್.ಕೆ. ಉಮೇಶ್ ಅವರ ಕೃತಿ. ಎಸ್. ಕೆ. ಉಮೇಶ್ ಅವರು ತಮ್ಮ ವಿಶ್ರಾಂತ ಜೀವನದ ಸಂದರ್ಭದಲ್ಲಿ ಬರಹಕ್ಕೆ ಜೋತು ಬೀದ್ದಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ಡಾ. ದೊಡ್ಡರಂಗೇಗೌಡ. ಈ ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು ಕೃತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಪೊಲೀಸ್ ಇಲಾಖೆಗೆ ವಿಶಿಷ್ಟ ಸ್ವರೂಪವಿದೆ, ಅಲ್ಲಿನ ಶಿಸ್ತು, ಶ್ರದ್ಧೆ ಕೆಲಸದ ರೀತಿ, ಬಿಡುವಿರದೆ ಅಹರ್ನಿಶೆ ದುಡಿವ ಮನೋಭಾವ, ಸತ್ಯಶೋಧನೆ, ಪಾಲಿಸಬೇಕಾದ ನಿಷ್ಠೆ, ವಹಿಸಬೇಕಾದ ತಾಳ್ಮೆ, ಅಪರಾಧಿಗಳ ಪತ್ತೆ, ಕೋರ್ಟುಗಳಿಗೆ ಹಾಜರಾತಿ, ಎಲ್ಲೆಡೆ ಆಲಸ್ಯ ಮಾಡದೇ ತೊಡಗಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಕಂಡುಂಡ, ಅನುಭವಿಸಿದ ಎಲ್ಲಾ ಅನುಭವಗಳನ್ನು ಇಲ್ಲಿ ದಾಖಲಿಸಲಿಲ್ಲ. ಶೇಖಡವಾರು 25% ಭಾಗ ಇಲ್ಲಿ ಹೊರ ಹೊಮ್ಮಿರಬಹುದು. ಅಲ್ಲೇ ಈ ಲೋಕದ ಅನಂತ ಮುಖ ತೆರೆದುಕೊಂಡಿದೆ. ಸಾಮಾನ್ಯನ ದೃಷ್ಟಿಯಿಂದ ಎಲ್ಲವೂ ಹೊಸದು ಎನ್ನುತ್ತಾರೆ ದೊಡ್ಡರಂಗೇಗೌಡರು. ಇಲ್ಲಿ ವಿಂಗ್ ಕಮಾಂಡರ್ ಕಣ್ಣು ಮುಚ್ಚಿದ ಹರಿದ ನೋಟು, ಕಳ್ಳ ದೇವರು, ಪಾಯಲ್- say, ಅಯೋಧ್ಯೆ ಕಳ್ಳರು, ಲಕ್ಷ್ಮಿ ಲೆಕ್ಕ ಚುಕ್ತ, ಇ-ರಾಣಿ, ಸೈನೈಡ್ ಮಲ್ಲಿಕ, ಆಪರೇಷನ್ ಡೈಮಂಡ್ ಲಾಕೆಟ್, ಶೃತಿ ಇದ್ದರೆ ಮಾತ್ರ, ಮುಯ್ಯಿಗೆ ಮುಯ್ಯಿ, ಎಸ್ಪಿ ತಲೆಗೆ ಮೂರು ಸಾವಿರ ಸುಪಾರಿ, ವಿನಿವಿಂಕ್ ಸೌಧ, ದಯಾನಂದ್ ಪೈ ಶೂಟೌಟ್, ಮೂಳೆ ಮಾತನಾಡಿದವು, ಮಜಾ ಪೊಲೀಸ್, ಪ್ರೀತಿಯ ಮೂಟೆ, ರಾತ್ರಿ ರಾಣಿ, ಶವದ ಶಯ್ಯೆ, ಮುತ್ತಪ್ಪ ರೈ, ಕಾಫಿ ಡೇ, ಮಾಯ್ಕಾರರ ಮಾದೇವ, ಪೂರ್ಣಿಮಾ, ಪಾಂಡು ರಂಗ ವಿಠಲ, ಮರಿ ವೀರಪ್ಪನ್, ಮಂಗನ ಮಾಡಿಬಿಟ್ಟ, ಹುಣ್ಣಿಮೆ ಕಿಲ್ಲರ್, ಹಿರಣ್ ಶಿಕಾರಿ, ಕೃಷ್ಣನ ರಥಕ್ಕೆ ಮರುಮದುವೆ, ನಸ್ರು, ಇಸ್ಕಾನ್ ಬುಡದಲ್ಲಿ ತುಪಾಕಿ ಹಾರಿತು, ಚಿಕ್ಕ ಪಾಠ, ಮಧ್ಯರಾತ್ರಿಯ ಗೆಜ್ಜೆನಾದ, ಬಬ್ಲೂ ಕಿಂಗ್ ಡಮ್, ಕಾಲ ಚಕ್ರ, ಶೈಲಾ ಶ್ರೀಶೈಲಾ ಸೇರಿದ್ದೇಕೆ, ಯೂ-ಟ್ಯೂಬ್, ಕಿಲ್ಲರ್ ಮಿಷನ್, ಬರ್ಫಿ ವೆಂಕಟೇಶ, ಪ್ರಾಣ ಸ್ನೇಹಿತೆ, ಮಣಗಟ್ಟಲೇ ಚಿನ್ನ ಮಾಯಾ ಎಂಬ 40 ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.