ಹಿರಿಯ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರ ’ಮುಂಬೈ ದಾಳಿ’ ಕೃತಿಯು ಅನುಭವ ಕಥನವಾಗಿದೆ. ಈ ಕೃತಿ ಅಜ್ಮಲ್ ಕಸಬ್ ಎಂಬೊಬ್ಬ ಪಾತಕಿ ಜೀವಂತ ಸೆರೆಸಿಕ್ಕ ರಹಸ್ಯ ಕಾರ್ಯಚರಣೆ ಕುರಿತು ವಿವರಿಸುತ್ತದೆ. ಪಾಕಿಸ್ತಾನವು ಮುಂಬೈ ನಗರದ ಮೇಲೆ ದಾಳಿ ಮಾಡಲು ತೆಗೆದುಕೊಂಡ ಕ್ರಮಗಳನ್ನು ಎಳೆಎಳೆಯಾಗಿ ಅಜ್ಮಲ್ ಬಿಚ್ಚಿಡುವ ಮಾತುಗಳು ಇಲ್ಲಿ ರೋಚಕವೆನ್ನಿಸುತ್ತದೆ. ಅಜ್ಮಲ್ ಕಸಬ್ ಕೇವಲ 21 ವರ್ಷ ವಯಸ್ಸಿನ ಯುವಕನಾಗಿದ್ದ. ಅವನಿಗೆ ಆಮಿಷಗಳನ್ನು ತೋರಿಸಿ ಪಾಕಿಸ್ತಾನವು ಹೇಗೆ ಅವನನ್ನು ಒಬ್ಬ ಆತಂಕವಾದಿಯನ್ನಾಗಿ ಪರಿವರ್ತಿಸಿತು ಮತ್ತು ಈ ಮುಂಬೈ ದಾಳಿ ನಡೆಸಲು ಪಾಕಿಸ್ತಾನದ ಗೂಢಚಾರ ಸಂಸ್ಥೆ, ಸೈನ್ಯಾಧಿಕಾರಿಗಳು ಯಾವ ರೀತಿ ಯೋಜನೆ ಮಾಡಿದರು ಎನ್ನುವುದೇ ಇಲ್ಲಿ ವಿಶೇಷವೆನ್ನಿಸುತ್ತದೆ. ಭಾರತದ ವಿರುದ್ದ ಪಾಕ್ ಸರಕಾರ ಮತ್ತು ಇಸ್ಲಾಮ್ ಉಗ್ರಗಾಮಿಗಳು ತಮ್ಮಂಥವರನ್ನು ಸೇರಿಸಿಕೊಂಡು ತರಬೇತಿ ಕೊಡುವ ವಿಧಾನದಿಂದ ಮೊದಲಾಗಿ,ಎಲ್ಲ ಪಾತಕಿ ಕೃತ್ಯವನ್ನೂ ಬಿಚ್ಚಿ ಹೇಳಿದ ಕರಾಳ ಕಥೆಯ ಯಥಾವತ್ ವರದಿಯ ಕೃತಿ ಇದಾಗಿದೆ.
©2024 Book Brahma Private Limited.