'ಮನೋಜನನಿ' ಪುಂಡಲೀಕ ಕಲ್ಲಿಗನೂರ ಅವರ ಕಾದಂಬರಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ದತ್ತಿ ಪುರಸ್ಕಾರಕ್ಕೆ 2021ನೇ ಸಾಲಿನಲ್ಲಿ ಈ ಕೃತಿಯು ಆಯ್ಕೆಯಾಗಿರುತ್ತದೆ. ಅವರು ತಮ್ಮೊಳಗಿನೆ ಕೆಲವೊಂದು ವಿಚಾರಗಳನ್ನು ಈ ಕೃತಿಯಲ್ಲಿ ಹೀಗೆ ಬಿಚ್ಚಿಟ್ಟಿದ್ದಾರೆ; ಈ ನಡುವೆ 1998ರಿಂದ ಬೆಂಗಳೂರಲ್ಲೇ ಇದ್ದ ನಾನು, ಕೊರೋನಾಕಾಲ ಶುರುವಾಗುವ ಮೊದಲು ಗಜೇಂದ್ರ ಗಡದಲ್ಲಿ ಮನೆ ಕಟ್ಟಲು ಶುರುವಿಟ್ಟುಕೊಂಡಿದ್ದೆ. ಮಗ ವೀರೇಂದ್ರನ ಮದುವೆಯನ್ನೂ ಮಾಡಿ, ನನ್ನ ಸಾಮ್ರಾಜ್ಯವನ್ನು ಇದ್ದಕ್ಕಿದ್ದಂತೆ ಬೆಂಗಳೂರಿನಿಂದ ನಮ್ಮೂರು ಗಜೇಂದ್ರಗಡಕ್ಕೆ ವರ್ಗಾಯಿಸಿದೆ! ಈ ನನ್ನ ನಡೆ ನನಗೇ ಆಶ್ಚರ್ಯ ತಂದಿದೆ! ಈ ಕೊರೊನಾ ಕಾಲದಲ್ಲಿ ಎಲ್ಲರೂ ಪ್ರಾಣಭಯದಿಂದ ತೊಳಲಾಡುತ್ತಿದ್ದರೆ, ನಾನು ಮನೆ- ಮದುವೆ ಮಾಡಿ ಮುಗಿಸುವುದರಲ್ಲಿ ಮುಳುಗಿದ್ದೆ!! ಬೆಂಗಳೂರನ್ನು ಸೇರುವುದು ಎಷ್ಟು ಕಷ್ಟವೋ ಬಿಟ್ಟು ಬರುವುದು ಅಷ್ಟೇ ಕಷ್ಟ! ಎಂದು ಹಲವರು ಹೇಳುವುದನ್ನು ಕೇಳಿದ್ದೇನೆ. ನನ್ನ ಮಟ್ಟಿಗೆ ಹಾಗಾಗಲಿಲ್ಲ. ಸೇರುವಾಗ ಎಷ್ಟು ಸುಲಭವಾಗಿತ್ತೋ ಬರುವಾಗಲೂ ಅಷ್ಟೇ ಸುಲಭವಾಗಿ ಬಿಟ್ಟುಬಂದೆ.ಬೆಂಗಳೂರನ್ನು ಬಿಟ್ಟು ಬರುವ ಮೊದಲು ನಾನು ಹಲವರನ್ನು ನೆನೆಯುವುದು ನನ್ನ ಕರ್ತವ್ಯ. 1990ರಿಂದಲೇ ಲಂಕೇಶ್ ಪತ್ರಿಕೆಗೆ ಕಲಾವಿದನಾಗಿ ಐದು ವರ್ಷ ಕೆಲಸ ಮಾಡಿದ್ದೆ ಎಂಬುದನ್ನು ಈ ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ.
©2025 Book Brahma Private Limited.