ಸುಧಾಮೂರ್ತಿ ಅವರ ‘ಗುಟ್ಟೊಂದು ಹೇಳುವೆ’ ಪುಸ್ತಕ ಕಥೆಯೂ ಅಲ್ಲ, ಕಾದಂಬರಿಯಂತೂ ಅಲ್ಲವೇ ಅಲ್ಲ. ಇದೊಂದು ಕಂಡುಂಡ ಅನುಭವಗಳ ಕಥನ. ಘಟನೆಗಳ ನೈಜ ಚಿತ್ರಣ. ಬಾಲ್ಯದಲ್ಲಿ ತಾವು ಕಂಡು, ಕೇಳಿದ, ಅನುಭವಿಸಿದ ಚಿತ್ರಣಗಳನ್ನು ಚಾಚೂ ತಪ್ಪದೆ ಹೇಳಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಸಫಲತೆಯನ್ನು ಕಂಡಿದ್ದಾರೆ.
ಬದುಕಿನ ಬೇರೆ ಬೇರೆ ಆಯಾಮಗಳ ಬಹುಮುಖಿ ಚಿತ್ರಣಗಳನ್ನು ಕಣ್ಣೆದುರಿಗೆ ತಂದು ಚಿತ್ರಿಸಲು ಸುಧಾಮೂರ್ತಿ ಅವರು ಪ್ರಯತ್ನಿಸಿದ್ದಾರೆ. ಅನುಭವಗಳ ಆಧಾರದಲ್ಲಿ ಬರೆದ ಈ ಕೃತಿ ಹದಿನೇಳು ಮುದ್ರಣಗಳನ್ನು ಕಂಡಿದೆ. ಜೊತೆಗೆ ತಮಿಳು, ತೆಲುಗು, ಮರಾಠಿ, ಬಂಗಾಲಿ, ಗುಜರಾತಿ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿದೆ.
©2025 Book Brahma Private Limited.