ನಾಡನ್ನು ಬಹುವಾಗಿ ಪ್ರಭಾವಿಸಿದ, ಪ್ರಭಾವಿಸುತ್ತಲೇ ಇರುವ ಶಕ್ತಿ ಮಹಾತ್ಮ ಗಾಂಧಿ. ಸೃಜನಶೀಲ ಸಾಹಿತ್ಯವೂ ಗಾಂಧಿಯನ್ನು ಆಗಾಗ ನೆನೆಯುವುದಿದೆ. ನವೋದಯದಿಂದ ಬಂಡಾಯ ಸಾಹಿತ್ಯ ಚಳವಳಿಯವರೆಗೆ ಅನೇಕ ಕವಿಗಳು, ಲೇಖಕರು ಗಾಂಧೀಜಿ ಅವರನ್ನು ಬಗೆಬಗೆಯಾಗಿ ನೆನೆದಿದ್ದಾರೆ.
ಆದರೆ ಕನ್ನಡ ಕಂಡ ಅದ್ಭುತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಮನೆಗೆ ಗಾಂಧಿ ಬಂದದ್ದು ಹೇಗೆ ಎಂಬ ಕುತೂಹಲ ತಣಿಸಿದ್ದಾರೆ ಲೇಖಕಿ ರಾಜೇಶ್ವರಿ ತೇಜಸ್ವಿ. ಅವರ ಮನೆಗೆ ಗಾಂಧಿ ಬರುವುದು ಚರಕದ ರೂಪದಲ್ಲಿ.
ತೇಜಸ್ವಿ ಅವರನ್ನು ಗಾಂಧಿ ಪ್ರಭಾವಿಸಿದ ಬಗೆ, ಕುವೆಂಪು ಕುಟುಂಬದಲ್ಲಿ ಮಹಾತ್ಮ ಅರಳಿದ ಬಗೆಗೂ ಪುಸ್ತಕ ಸೊಗಸಾಗಿ ಮಾತನಾಡುತ್ತದೆ. ’ನನ್ನ ತೇಜಸ್ವಿ’ ಕೃತಿಯಲ್ಲಿ ಕಂಡ ರಾಜೇಶ್ವರಿ ಅವರ ಲವಲವಿಕೆಯ ಬರಹ ಇಲ್ಲಿಯೂ ಸೆಳೆಯುತ್ತದೆ.
©2025 Book Brahma Private Limited.