ಟಾಲ್‌ಸ್ಟಾಯ್ ತಮ್ಮ ಬದುಕಿನ ಅನುಭವದ ಮೂಲಕ ಕಂಡುಕೊಂಡ ಸತ್ಯಗಳು ಮತ್ತು ಜಗತ್ತಿನ ಶ್ರೇಷ್ಠ ದಾರ್ಶನಿಕರ ಮಾತುಗಳನ್ನು ಸೇರಿಸಿ ಈ ಪುಸ್ತಕವನ್ನು ರಚಿಸಿದ್ದಾರೆ. ವೈಯಕ್ತಿಕವಾಗಿಯೂ ಇದು ಅವರಿಗೆ ತುಂಬ ಸಂತೃಪ್ತಿ ನೀಡಿದ ಕೃತಿ. ಇದನ್ನು ಅವರೇ ಬರೆದುಕೊಂಡಿದ್ದಾರೆ. ಮುನ್ನೂರ ಅರವತ್ತೈದು ಸರಳ, ಅಷ್ಟೇ ಮಹತ್ವದ ಸಂಗತಿಗಳನ್ನು ಪುಟ್ಟಪುಟ್ಟದಾಗಿ ಈ ಕೃತಿಯಲ್ಲಿ ನೀಡಲಾಗಿದೆ. ಪ್ರತಿದಿನವೂ ಒಂದೊಂದು ಅಧ್ಯಾಯವನ್ನು ಓದಿಕೊಳ್ಳಲು ಅನುಕೂಲವಾಗುವಂತೆ ದಿನಾಂಕದ ಪ್ರಕಾರವೇ ಸಂಗ್ರಹಿಸಲಾಗಿದೆ.ಧರ್ಮಕ್ಕೆ ಸಂಬಂಧಿಸಿದಂತೆ ಟಾಲ್ ಸ್ವಾಯ್ ಹೇಳಿದ ಮಾತು ಹಿಂದಷ್ಟೇ ಅಲ್ಲ ಇಂದು ಮತ್ತು ನಾಳೆಗೂ ಅನ್ವಯ. ಇಂಥ ಮಿಂಚುಗಳು ಸಾಕಷ್ಟಿವೆ. ಅಂದಹಾಗೇ, ಒಂದು ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಈ ದಿಸೆಯಲ್ಲಿ ಟಾಲ್‌ಸ್ಟಾಯ್ ಗ್ರಹಿಕೆಗಳು ದಾರಿ ತೋರುತ್ತವೆ ಎಂದು ಬಿ.ಎಸ್.ಜಯಪ್ರಕಾಶ ನಾರಾಯಣರವರು “ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.