ಸುಡು ಬಯಲು ಎಂಬ ಅಂಕಣ ಬರಹಗಳ ಸಂಗ್ರಹವು ಡಾ.ಎಂ.ಎಸ್ ಮಣಿ ಅವರ ಕೃತಿಯಾಗಿದೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮಗಳ ಅತಿರೇಕ ಈ ಎಲ್ಲವುಗಳ ಕುರಿತು ಹೇಳುತ್ತದೆ. ಮೂಲತಃ ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವವನ್ನು ಕಟ್ಟುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.
ಡಾ.ಎಂ.ಎಸ್. ಮಣಿ ಅವರು ಪತ್ರಿಕಾ ರಂಗದಲ್ಲಿ ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಮಾಧ್ಯಮ ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...
READ MORE