ನೌಶಾದ್ ಜನ್ನತ್ತ್ ಅವರ ಜಲಪ್ರಳಯ ಕೃತಿಯು ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯದ ಅನುಭವ ಕಥನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಗೇಶ್ ಕಾಲೂರು ಅವರು, ‘ಸಂತ್ರಸ್ತರಿಗಾಗಿ ಸಹೃದಯರು ಕಳುಹಿಸಿದ ಕಂಬಳಿಗಳು ಗಂಟುಕಳ್ಳರ ಮನೆಯ ಕಪಾಟುಗಳಲ್ಲಿ ಈಗಲೂ ಬೆಚ್ಚಗೆ ಮಲಗಿರುವಾಗ, ಗುಣಮಟ್ಟದ ಅನೇಕ ವಸ್ತುಗಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಬಿಸ್ಕೇಟ್ ಪ್ಯಾಕ್ ಹಂಚಿದ ಅನೇಕ ತೋರಿಕೆಯ ಸಂಘಟನೆಗಳು ಇನ್ನೊಮ್ಮೆ ಜಲಪ್ರಳಯವಾಗಬಾರದೇ ಎಂದು ಕಾದು ಕುಳಿತಿರುವಾಗ, ಸಮಾಜಸೇವೆಯ ಭ್ರಮೆಗೆ ಬಿದ್ದ ಬೆರಳೆಣಿಕೆಯ ಸತ್ಯನಿಷ್ಟರು ಪಟ್ಟಭದ್ರ ಹಿತಾಸಕ್ತಿಗಳ ಅವಕೃಪೆಗೆ ಪಾತ್ರರಾಗಿ ಇನ್ನು ಈ ಸಮಾಜಸೇವೆ ಸಾಕು ಎಂದು ಭ್ರಮನಿರಸನರಾಗಿರುವುದಂತೂ ಸತ್ಯ ಎನ್ನುವ ಹಾಗೆ ಈ ಕೃತಿಯಿದೆ. ಇಲ್ಲಿಯ ಲೇಖನಗಳು ಅನುಭವದ ಮೂಸೆಯಿಂದಲೆ ಹೊರಬಂದು ಸುಲಲಿತವಾಗಿ ಓದಿಸಿಕೊಂಡು ಹೋಗುವುದಲ್ಲದೆ, ಕೆಲವರ ಮುಖವಾಡಗಳನ್ನು ಮುಲಾಜಿಲ್ಲದೆ ಕಳಚಿಹಾಕಿವೆ. ಇದ್ದದ್ದನ್ನು ಇದ್ದಂತೆ ಹೇಳುವಾಗ ಕೆಲವರ ಮನಸಿಗೆ ನೋವಾಗುವುದು ಸಹಜ. ಸಮಾಜ ಸೇವೆಯ ನೆಪದಲ್ಲಿ ಸುಲಿಗೆಗಿಳಿದವರ ಕುರಿತು, ಬೆಂಕಿ ಬಿದ್ದ ಮನೆಯಿಂದ ಗಳ ಹಿರಿಯುವವರ ಕುರಿತು, ಬಾಯಿಗೆ ಹೊಲಸು ಮೆತ್ತಿಕೊಂಡು ಭ್ರಷ್ಟರೊಂದಿಗೆ ಕೈ ಜೋಡಿಸುವವರ ಕುರಿತು ಇಲ್ಲಿಯ ಲೇಖನಗಳು ಜೀವಂತಿಕೆ ಉಳಿಸಿಕೊಂಡಿವೆ. ಇಷ್ಟಲ್ಲದೆ, 2018ರ ಜಲಪ್ರಳಯದ ಇತಿಹಾಸವನ್ನು ದಾಖಲೀಕರಣ ಮಾಡುವ ಆಕರ ಸಾಮಗ್ರಿಯಾಗಿಯೂ ಇದಾಗಿದೆ’ ಎಂದಿದ್ದಾರೆ.
‘ಜಲಪ್ರಳಯ’ ಕೃತಿಯ ಕುರಿತು ಲೇಖಕ ನೌಶಾದ್ ಜನ್ನತ್ತ್ ಅವರ ಮಾತು.
©2024 Book Brahma Private Limited.