2008 ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಕರ್ನಾಟಕದ ಮೇಜರ್ ಸಂದೀಪ್ ಉನ್ನೀಕೃಷ್ಣನ್ ಅವರ ಕುರಿತು ಬರೆದಂತಹ ಕೃತಿ ಮೇಜರ್ ಸಂದೀಪ್ ಹತ್ಯೆ. 26ರಿಂದ 29ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಪೊಲೀಸ್ ಪಡೆ ಹಾಗೂ ಕಮ್ಯಾಂಡೋ ಪಡೆಗಳ ನಿರಂತರ ಪರಿಶ್ರಮದ ಕ್ಷಣ ಕ್ಷಣದ ವಿವರಗಳನ್ನು ಕೂಡ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಉಗ್ರರ ದಾಳೀ ಯಾವ ರೀತಿ ನಡೆಯಿತು, ದಾಳಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಯಾವ ರೀತಿ ನಡೆಯಿತು ಮತ್ತು ಆ ಸಂಧರ್ಭದಲ್ಲಿ ಪೊಲೀಸ್ ಮತ್ತು ಕಮ್ಯಾಂಡೋ ಪಡೆಗಳು ತೋರಿದ ಸಾಹಸಗಳ ಕುರಿತು ರೋಚಕವಾಗಿ ವಿವರಿಸಿದಂತಹ ಕೃತಿ ಇದು. ಯಾವ ರೀತಿ ಭಾರತದ ರಕ್ಷಣಾ ಪಡೆಗಳು ತಮ್ಮ ಜೀವವನ್ನು ಪಣಕ್ಕಿಟ್ಟು ನಾಗರೀಕರ ರಕ್ಷಣೆಗೆ ಕಟಿಬದ್ಧರಾಗಿರುತ್ತಾರೆ ಎಂಬುದರ ವಿವರಣೆ ಈ ಪುಸ್ತಕದಲ್ಲಿ ಕಾಣಬಹುದು. ಪ್ರಮುಖವಾಗಿ ಈ ಪುಸ್ತಕವು ದಾಳಿಯಲ್ಲಿ ಹತರಾದ ಸಂದೀಪ್ ಉನ್ನೀಕೃಷ್ಣನ್‍ರ ಧೈರ್ಯ ಮತ್ತು ಸಾಹಸದ ಕುರಿತು ವಿವರಿಸಲಾಗಿದೆ. ತಮ್ಮ ಸಹೋದ್ಯೋಗಿ ಹಾಗೂ ಅಮಾಯಕ ಜನತೆಯ ಪ್ರಾಣ ಕಾಪಾಡಲು ತಮ್ಮ ಪ್ರಾಣ ನೀಡಿದ ಮೇಜರ್ ಸಂದೀಪ್ ಅವರ ಬಲಿದಾನ ಎಲ್ಲಾ ಓದುಗರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಲೇಖಕರು ವಿವರಿಸಿದ್ದಾರೆ.
©2024 Book Brahma Private Limited.