ಡಾ.ಕೆ. ಶಿವರಾಮ ಕಾರಂತರ ಆತ್ಮಕಥನ 'ಹುಚ್ಚು ಮನಸ್ಸಿನ ಹತ್ತು ಮುಖಗಳು'. ಅವರ ಪ್ರಯೋಗಗಳ ಸೋಲು, ಗೆಲುವುಗಳನ್ನು ಅದರಿಂದ ಸಂಪಾದಿಸಿದ ಕೀರ್ತಿ ಅಪಕೀರ್ತಿಗಳನ್ನು, ಗಳಿಸಿದ ಲಾಭ ನಷ್ಟಗಳನ್ನು ವಿವರವಾಗಿ ನಿರೂಪಿಸುವ ಕೃತಿ. ಕಷ್ಟಪಟ್ಟು ತಯಾರಿಸಿದ್ದ ಚಲನಚಿತ್ರದ ನೆಗೆಟಿವ್ ಸಂಪೂರ್ಣವಾಗಿ ಸುಟ್ಟು ಹೋದದ್ದು. ಪ್ರಾಯಕ್ಕೆ ಬಂದಿದ್ದ ಹಿರಿಯ ಮಗ ಹರ್ಷನ ಅಕಾಲ ಮರಣ, ತಾವು ನಂಬಿದ್ದ ವ್ಯಕ್ತಿಗಳಿಂದಲೇ ಅನುಭವಿಸಿದ ವಂಚನೆ ಯಾವುದೂ ಕಾರಂತರನ್ನು ಕುಗ್ಗಿಸಲಿಲ್ಲ. ಯಾವ ಸಂದರ್ಭದಲ್ಲೂ ಮನುಷ್ಯತ್ವ ಕಳೆದುಕೊಳ್ಳದೆ, ದೈನಂದಿನ ತಾಪತ್ರಯಗಳಲ್ಲಿ ಕಳೆದು ಹೋಗದೆ, ಯಶಸ್ಸು ಸಿಕ್ಕಾಗ ಹಿಗ್ಗದೆ ಸಮಚಿತ್ತವನ್ನು ಕಾಯ್ದುಕೊಂಡು ಬಂದ ಸಂವೇದನಾಶೀಲ ಮನಸ್ಸೊಂದರ ಬೆಳವಣಿಗೆಯನ್ನು ಈ ಕೃತಿ ದಾಖಲು ಮಾಡುತ್ತದೆ. ತಮ್ಮ ಮೇಲೆ ಪ್ರಭಾವ ಬೀರಿದ ವಸ್ತುಗಳು, ಕಲಾಕೃತಿಗಳು ಹಾಗೂ ಮನುಷ್ಯರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವ ಕಾರಂತರು, ವಿಶಾಲವಾದ ಜಗತ್ತಿನಲ್ಲಿ ತಾವಿನ್ನೂ ಸಣ್ಣವರೆಂಬ ವಿನೀತ ಭಾವನೆಯನ್ನು ಸದಾ ತೋರಿಸುತ್ತಾರೆ. ಕಾಣದ್ದರ ಬಗ್ಗೆ ಇನ್ನೂ ಕುತೂಹಲ ಇಟ್ಟುಕೊಂಡಿರುವ ಕಾರಂತರು, ತಾವೇ ಹೇಳಿಕೊಳ್ಳುವಂತೆ 'ಆಸ್ತಿಕರೂ ಅಲ್ಲ, ನಾಸ್ತಿಕರೂ ಅಲ್ಲ. ಅವರೊಬ್ಬ ಅನಾಸ್ತಿಕರು’ ಎಂದು ತಾವೇ ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1948ರಲ್ಲಿ (ಪುಟ: 332) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. ನಂತರ, ಸಾಗರದ ಅಕ್ಷರ ಪ್ರಕಾಶನವು 1984ರಲ್ಲಿ (ಪುಟ: 385) ಈ ಕೃತಿಯನ್ನು ಪರಿಷ್ಕರಿಸಿ, ವಿಸ್ತರಿಸಿದ ಕೃತಿ ಇದು. ಮತ್ತೇ ಇದೇ ಪ್ರಕಾಶನವು 1991ರಲ್ಲಿ ಕೃತಿಯನ್ನು ಮತ್ತೊಮ್ಮೆ ಪರಿಷ್ಕರಿಸಿ (ಪುಟ: 378) ಪ್ರಕಟಿಸಿತ್ತು.
PARVATHI responsible for MARALI MANNIGE of Shivarama Karanth as per his ಹುಚ್ಚು ಮನಸ್ಸಿನ ಹತ್ತು ಮುಖಗಳು
©2024 Book Brahma Private Limited.