ಕಾಂಚೋಡು ಗೋಪಾಲಕೃಷ್ಣ ಭಾರತೀಯ ಭೂ ಸೈನ್ಯದಲ್ಲಿ ಹದಿನೆಂಟು ವರ್ಷ ಕೆಲಸ ಮಾಡಿದ್ದವರು. ಸೈನ್ಯದಲ್ಲಿ ಆರ್ಟಿಲರಿ ಫೋರ್ಸ್ ನಲ್ಲಿ ರೋವರ್ ಪೈಲಟ್ ಆಗಿ ಕೆಲಸ ಮಾಡುವಾಗ ಭಾರತದ ಸೈನಿಕರು ಕುಡಿಯುವ ನೀರಿಗೆ ಎಲ್ ಟಿ ಟಿ ಇ ವಿಷ ಹಾಕಿದ್ದು; ಅದನ್ನು ನೋಡಿದ ಹುಡುಗ ಇವರಿಗೆ ಹೇಳಿದ್ದು ಅದಕ್ಕಾಗಿ ಎಲ್ ಟಿ ಟಿ ಇ ಅವರು ಹುಡುಗನ ಗ್ರಾಮದವರನ್ನೆಲ್ಲ ಕೊಂದದ್ದು ಇಂತಹ ಹೃದಯ ವಿದ್ರಾವಕ ಘಟನೆಗಳನ್ನು ಅನುಭವಿಸಿದವರು ಅವರು.
ಕಾಂಚೋಡು ಗೋಪಾಲಕೃಷ್ಣ ಅವರು ಇಂದಿರಾ ಗಾಂಧಿಯವರ ಬಾಡಿ ಗಾರ್ಡ್, ಕಾಂಚೋಡು ಅವರು ಬ್ರಾಸ್ಟ್ರಾಕ್ ಕಾರ್ಯಾಚರಣೆ ವೇಳೆ ಎ ಪಿ ಜೆ ಅಬ್ದುಲ್ ಕಲಾಂ ಅವರ ಅಂಗರಕ್ಷಕರಾಗಿದ್ದರ ಅನುಭವ ಹಾಗೂ ಖಲಿಸ್ತಾನ್ ಆಪರೇಷನ್, ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ದಳದಲ್ಲಿದ್ದಾಗ ಜರುಗಿದ ಘಟನೆಗಳನ್ನು ಇಲ್ಲಿ ನೆನದಿದ್ದಾರೆ.
ಸೇನೆಗೆ ಸೇರುವವರಿಗೆ ಮಾರ್ಗದರ್ಶನ,ತರಬೇತಿಯ ಅರಿವಿನ ಮಾತುಗಳನ್ನು, ತಮ್ಮ ಅನುಭವದ ಹಲವು ಚಿಂತನೆಗಳನ್ನು ಗೋಪಾಲಕೃಷ್ಣ ಇಲ್ಲಿ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಅನೇಕ ಸೇನಾಧಿಕಾರಿಗಳು ಮತ್ತು ಸೈನಿಕರು ತಮ್ಮ ಅನುಭವವನ್ನು ಹೇಳಿದ್ದಾರೆ. ಸೈನಿಕನ ಮಿಡಿತಗಳ ಬಗ್ಗೆ ಗೋಪಾಲಕೃಷ್ಣ ಅವರ ಹತ್ತಿರದ ಸಂಬಂಧಿಗಳು ಹೇಳಿದ ಮಾತು, ಎರಡು ತಿಂಗಳು ಪೋಸ್ಟ್ ಇಲ್ಲದ ಜಾಗಕ್ಕೆ ಹೋದ ಗೋಪಾಲಕೃಷ್ಣ ಸಂಪರ್ಕಕ್ಕೆ ಸಿಗದೆ ಇದ್ದಾಗ ತನಗಾದ ಆತಂಕವನ್ನು ಅವರ ಪತ್ನಿ ಸುಲೋಚನಾ ವಿವರಿಸಿರುವ ಸಂಗತಿಗಳು ಒಳಗೊಂಡಿದೆ.
©2025 Book Brahma Private Limited.