ಕನ್ನಡ ನಟ, ನಿರ್ದೇಶಕ ಇದೀಗ ತಮ್ಮದೊಂದು ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆರ್ಟ್ ಆಫ್ ಸಕ್ಸಸ್ ಎಂಬುದು ಅವರ ಕೃತಿ. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಬಂದ ನಟ ರಮೇಶ್ ಇಂಥದೊಂದು ಯಶಸ್ಸಿನ ಬಗ್ಗೆ ಹೇಳಲು, ಮಾರ್ಗದರ್ಶಿಯಾಗಲು ತುಂಬ ಅರ್ಹರು. ಅವರ ಈ ಕೃತಿ ಯಶಸ್ಸಿನ ಕಲೆಯ ಬಗ್ಗೆ ಹೇಳುತ್ತದೆ. ರಮೇಶ್ ಅವರದೇ ಆದ ಶೈಲಿಯೊಂದು ಈ ಕೃತಿಯ ಮುಖ್ಯ ಆಕರ್ಷಣೆ.
ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕರಾಗಿ, ಕಿರುತೆರೆಯಲ್ಲಿ ನಿರೂಪಕರಾಗಿ ಖ್ಯಾತರಾಗಿರುವ ರಮೇಶ್ ಅರವಿಂದ್, ಪ್ರತಿಭಾವಂತರು ಮಾತ್ರವಲ್ಲ, ಕನ್ನಡ ಭಾಷೆಯ ಮೇಲೆ ಅಪಾರ ಹಿಡಿತವುಳ್ಳವರು. ಕೆ ಬಾಲಚಂದರ್ ಅವರ ನಿರ್ದೇಶನದ ಸುಂದರ ಸ್ವಪ್ನಗಳು ಚಿತ್ಗದ ಮೂಲಕ 1986ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಮೇಶ್, ಅದಕ್ಕೂ ಮೊದಲು ದೂರದರ್ಶನದಲ್ಲಿ ಪರಿಚಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿತ್ರರಂಗದಲ್ಲಿ ಅವರದು ಅದ್ಭುತ ಪ್ರತಿಭೆ. ಇದೀಗ ಅವರು ತಮ್ಮ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸುವ ಕೆಲಸದಲ್ಲೂ ತೊಡಗಿದ್ದು, ತಮ್ಮ ಪುಸ್ತಕವೊಂದನ್ನು ಪ್ರಕಟಿಸುವ ಮೂಲಕ ಸಾಹಿತ್ಯ ರಂಗಕ್ಕೂ ಕಾಲಿಟ್ಟಿದ್ದಾರೆ. ...
READ MORE