ಕವಿ, ಲೇಖಕರಾದ ಅಬ್ದುಲ್ ರಶೀದ್ ಅವರ ಪ್ರವಾಸ ಕಥನ ’ ಅಲೆಮಾರಿಯ ದಿನಚರಿ’ ಕೃತಿಯು ಹಲವು ಆಯಾಮಗಳನ್ನು ತೆರೆದಿಡುವ ವಿಶಿಷ್ಟ ಅನುಭವ ನೀಡುವಂತದ್ದಾಗಿದೆ.
’ನಿನ್ನ ಸುತ್ತಾಟ, ಹುಡುಕಾಟ, ಖಾಸಗಿ ಲೋಕದಲ್ಲಿ ಹರಿದಾಡುವ ನಿನ್ನ ಖುಷಿ, ಪ್ರೀತಿ, ಬೆರಗು, ತುಡಿತಗಳಿಗೆಲ್ಲಾ ನೀನು ಕೊಡುವ ಸ್ಪರ್ಶದ ನವಿರು ಎದೆಯ ಆಳದಲ್ಲಿ ತಂಪು ಗಾಳಿ ಬೀಸುತ್ತಲೇ, ನನ್ನೊಳಗೆ ಸಣ್ಣದೊಂದು ಹೊಟ್ಟೆ ಕಿಚ್ಚಿನ ಕಿಡಿಯನ್ನೂ ಹತ್ತಿಸಿಬಿಡುತ್ತದೆ. ಅಂತೆಯೇ, ಮುಂಬೆಳಗಿಗೆ ಪ್ರತಿಫಲಿಸುವ ಗರಿಕೆಯ ಮೇಲಿನ ಮಂಜಿನ ಹನಿಯಂತೆ, ಮುಟ್ಟಿದರೆ ಸಾಕು ತೇವವಾಗಿ ಬಿಡುವಂಥ ಭಾವ ಸುರಿಸುವ ನಿನ್ನ ಅಕ್ಷರಗಳು ಬಿಡಿಸುವ ಭಾವಚಿತ್ತಾರಗಳು ಎಲ್ಲೂ ಭಾರವಾಗದೆ, ಜಿಗಿಯುವ ಲವಲವಿಕೆಯನ್ನು ತುಂಬಿಕೊಂಡಿವೆ. ಇಲ್ಲಿನ ಮಳೆ, ಬಿಸಿಲು, ಹೆಂಗಸರು, ಮುದುಕರು, ಗಿಡಮರಗಳು... ಹೀಗೆ ನಿನ್ನ ಈ ಲೋಕದ ಹುಡಕಾಟಗಳೊಳಗೆಲ್ಲಾ ನಿನ್ನೊಳಗಿನ ಮಗು ಮಾತನಾಡಿರುವುದರಿಂದ, ಇಲ್ಲಿ ಪೊಳ್ಳು ಆದರ್ಶಗಳಿಲ್ಲ, ಮಾಸಿದ ತಲೆಯ ಅಕ್ಷರಗಳಿಲ್ಲ. ’ ಎನ್ನುವ ಭಾವ ಸ್ಪರ್ಶಿ ಅಂಕಣ ಬರಹಗಳು ಭಾವುಕ ಅನುಭವವನ್ನು ಓದುಗರಲ್ಲಿ ಉಂಟುಮಾಡುತ್ತದೆ.
©2025 Book Brahma Private Limited.