‘ಅಘೋರಿಗಳ ಲೋಕದಲ್ಲಿ’ ನಿಷಿದ್ಧ ಪ್ರಪಂಚದ ಅನುಭವ ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಅನುಭವ ಕಥನ. ‘ಶಕ್ತಿಯ ಒತ್ತಡವಿಲ್ಲದೆ ಭೌತಿಕವಾಗಿ ಒಂದು ಸೂಜಿಯೂ ಕದಲುವುದಿಲ್ಲ ಎಂದು ವಿಜ್ಞಾನ ಸಾಧಿಸುವುದು ಹೇಗೆ ನಿಜವೋ, ಮಾನಸಿಕವಾಗಿ ದುರ್ಬಲನಾದವನನ್ನು ಮಾನಸಿಕವಾಗೇ ಕದಲಿಸಬಹುದು ಎನ್ನುವುದೂ ಅಷ್ಟೇ ನಿಜ ಎನ್ನುತ್ತದೆ ಇನ್ನೊಂದು ವಿಜ್ಞಾನ, ಇವೆರಡರ ನಡುವೆ ಸಮನ್ವಯತೆ ಸಾಧಿಸುವವನೇ ಸಾಧಕನಾದರೆ, ಅಪಕ್ವ ಮತ್ತು ಸಾಧನೆಯ ದಾರಿಯನ್ನು ಸರಿಯಾಗಿ ಗಣಿಸದೆ ವಾಮಮಾರ್ಗವನ್ನೂ, ಅಸಂಪ್ರದಾಯಸ್ಥ ಪಥವನ್ನು ಹಿಡಿದು ಹಲವು ರೀತಿಯ ಹೊಸ ವಿಧಿವಿಧಾನಗಳಿಗೆ ಪಕ್ಕಾದವನು ಅಘೋರಿ.
ಜೊತೆಗೆ ಶತಮಾನಗಳ ಕಾಲದಿಂದಲೂ ಹರಿದು ಬಂದಿರುವ ಅಘೋರ ಸಂಪ್ರದಾಯ ಸಾಧನೆಯ ಹಂತಗಳ ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವ ರೀತಿಯಿಂದಾಗಿ ಅವರನ್ನು ವಿಭಿನ್ನ ಸಮಾಜವಾಗೇ ಗುರುತಿಸಲಾಗುತ್ತಿದೆ. ಹಾಗಾಗಿ ಅಘೋರಿ ಎನ್ನುವ ವರ್ಗದ ಸಾಧನೆ, ಸಾಧನೆ ಹೌದೇ ಅಲ್ಲವೇ ಎನ್ನುವುದು ಗಣಿಸುವವರ ಮೇಲೆ ಅವಲಂಬಿತವಾಗಿದೆಯೇ ಹೊರತಾಗಿ ಆ ಸಾಧನೆಯಿಂದ ಏನಾದರೂ ಅದ್ಭುತ, ಪವಾಡ, ಬದಲಾವಣೆ ಇತ್ಯಾದಿ ಆದೀತು, ಸಮಾಜಕ್ಕೆ ಮನುಕುಲಕ್ಕೆ ಎಂದು ನನಗೇನೂ ಅನ್ನಿಸಲಿಲ್ಲ. ವೈದ್ಯಕೀಯ ಮತ್ತು ಯೋಗ ಸಂಬಂಧಿ ಸಾಧನೆಗಳ ಹೊರತಾಗಿ,ಈ ಪುಸ್ತಕದ ಕಥಾನಕ ಆರಂಭವಾಗಿದ್ದು ನನಗೆ ಮೊದಲ ಬಾರಿಗೆ ಅಘೋರಿಯೊಬ್ಬನ ದರ್ಶನವಾದ ಸಮಯದಲ್ಲಿ, ಅದು ಸರಿ ಸುಮಾರು 2004 ರ ಮೇ ತಿಂಗಳು. ಅಲ್ಲಿಂದ ಆರಂಭವಾದ ಆಸಕ್ತಿ ಮತ್ತು ಆವತ್ತು ನನ್ನೊಂದಿಗೆ ಮಾತಿಗೆ ದೊರಕಿದ ಮಹನೀಯರ ಸಾಂಗತ್ಯದಿಂದ, ಅದರ ಅನುಭವದಿಂದ ಈ ಕೃತಿಯನ್ನು ರಚಿಸಿದ್ದೇನೆ’ ಎನ್ನುತ್ತಾರೆ ಲೇಖಕ ಸಂತೋಷ ಕುಮಾರ ಮೆಹೆಂದಳೆ.
©2024 Book Brahma Private Limited.