ಲೇಖಕ ಎ.ಓ. ಆವಲಮೂರ್ತಿ ಅವರು ಬರೆದ ಕೃತಿ-ಅಜ್ಜನ ಹೆಗಲ ಮೇಲೆ ಮೊಮ್ಮಗ. ಮಗುವಿನ ಶೈಕ್ಷಣಿಕ ತರಬೇತಿಯ ಅನುಭವ ಕಥನಗಳು ಎಂಬ ಉಪಶೀರ್ಷಿಕೆಯು ಮಗುವಿನ ಶಿಕ್ಷಣದಲ್ಲಿ ಇಲ್ಲಿಯ ವಿಚಾರಗಳ ಪ್ರಾಮುಖ್ಯತೆ ಇರುವುದನ್ನೇ ಸೂಚಿಸುತ್ತದೆ. ವಿಜ್ಞಾನದ ಕುತೂಹಲಕಾರಿ, ಅಚ್ಚರಿಯ ಸಂಗತಿಗಳನ್ನು ತುಂಬಾ ಸರಳವಾಗಿ ಮಕ್ಕಳಿಗಾಗಿ ಬರೆಯುತ್ತಿರುವ ಲೇಖಕರು, ಮಕ್ಕಳ ಸಹಜ ಸಂಶಯಾತ್ಮಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹೋಗುವುದು ಇಲ್ಲಿಯ ಬರವಣಿಗೆಯ ಉದ್ದೇಶವೂ ಆಗಿದೆ.
ಅಜ್ಜನ ಹೆಗಲ ಮೇಲೆ ಮೊಮ್ಮಗ ಕೃತಿಯ ವಿಮರ್ಶೆ
ಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದ ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ ಕೊಡಿಸುವ” ಇಂದಿನ ವ್ಯವಸ್ಥೆ ಆಂಕ ಗಳಿಕೆಗೆ ಸೀಮಿತ, ಮಗುವಿನ ಸೃಜನ ಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು. ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು. ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ದಿನ ನಿತ್ಯದ ವ್ಯವಹಾರಗಳಲ್ಲೇ ಮಗುವಿಗೆ ಆಟ ಆಡುತ್ತಲೇ ಪಾಠವನ್ನೂ ಕಲಿಸಿಕೊಡುವ ನೂರಾರು ಸಂದರ್ಭ ಗಳನ್ನು ಪೋಷಕರು ಆಯ್ಕೆ ಮಾಡಿಕೊಳ್ಳಿ ಬಹುದು. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದೈನಂದಿನ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಕೃತಿಯಲ್ಲಿ ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ.
(ಕೃಪೆ: ಹೊಸಓದು)
©2025 Book Brahma Private Limited.