ಪತ್ರಿಕೋದ್ಯಮದಲ್ಲಿ 'ಪಗೋ' ಎಂದೇ ಗುರುತಿಸಲ್ಪಡುವ ಪದ್ಯಾಣ ಗೋಪಾಲಕೃಷ್ಣ ಅವರು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ, ವರದಿಗಾರರಾಗಿ ಬಳಿಕ ಅಂಣಕಾರರಾಗಿಯೂ ಗುರುತಿಸಿಕೊಂಡವರು. ಪತ್ರಕರ್ತನ ಬದುಕು ಹೊರಗೆ ನೋಡಿದಾಗ ಅತ್ಯಂತ ರಮ್ಯ ಮತ್ತು ರೋಚಕವಾಗಿರುತ್ತದೆ. ಆದರೆ ಆತ ತನ್ನ ವೈಯಕ್ತಿಕವಾದ ಎಲ್ಲ ಬದುಕನ್ನು ಒತ್ತೆಯಿಟ್ಟು ಪತ್ರಿಕೆಗೆ ತನ್ನನ್ನು ಅರ್ಪಿಸಿಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರ ಜೊತೆಗೆ, ಮಾಲಕರ ಜೊತೆಗೂ ಅವರು ಮುಖಾಮುಖಿಯಾಗಬೇಕಾಗುತ್ತದೆ. ಈ ಎಲ್ಲ ಅನುಭವಗಳು ಇಂದಿನ ಪತ್ರಕರ್ತರಿಗೆ ಒಂದು ಆದರ್ಶವಾಗುತ್ತದೆ. ಈ ಕಾರಣದಿಂದ ಪದ್ಯಾಣ ಗೋಪಾಲಕೃಷ್ಣ ಅವರ ಜೀವನೋತ್ಸಾಹದ ಈ ಕೃತಿ ಮುಖ್ಯವಾಗುತ್ತದೆ. ಪತ್ರಿಕೋದ್ಯಮದೊಳಗಿರುವ ಕಷ್ಟ ಕಾರ್ಪಣ್ಯ ಮಾತ್ರವಲ್ಲ, ಇತರ ರಾಜಕೀಯಗಳನ್ನೂ ಈ ಕೃತಿ ಸರಳವಾಗಿ ತೆರೆದಿಡುತ್ತದೆ.
©2024 Book Brahma Private Limited.