ನೇರಳೆ ಮರ

Author : ಕೇಶವ ಮಳಗಿ

Pages 106

₹ 60.00




Year of Publication: 2019
Published by: ಕಥನ
Address: ನಂ.15, 7ನೇ ಬಿ ಅಡ್ಡ ರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-560 072.

Synopsys

ಲೇಖಕ ಕೇಶವ ಮಳಗಿಯವರ ”ನೇರಳೆ ಮರ ’ಒಂದು ವಿಶಿಷ್ಟ ಕಥಾನಕ.

ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಈ ಕೃತಿಯಲ್ಲಿ ಪ್ರಯತ್ನಿಸಿದ್ದಾರೆ.

ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು ಕೈಹಿಡಿದೆತ್ತುತ್ತ ಕಥೆಗಾರನನ್ನು ಬೆಳೆಸುವ ಬಗೆಯೇ ವಿಲಕ್ಷಣವಾದದ್ದು. ಬರಹಗಾರನ ಸೂಕ್ಷ್ಮಪ್ರಜ್ಞ್ಮೆ ಅದನ್ನು ಗಮನಿಸುವ ಬಗೆ, ಅದಕ್ಕೆ ಸ್ಪಂದಿಸುವ ಬಗೆ ಮತ್ತು ಅದೆಲ್ಲ ತನ್ನ ಮೇಲೆ ಉಂಟು ಮಾಡುತ್ತಿರುವುದನ್ನು ಅರ್ಥೈಸಿಕೊಳ್ಳುತ್ತ, ಮುಂದೆ ತಾನು  ತನ್ನ ಬರವಣಿಗೆಯಲ್ಲಿ ಮತ್ತೊಮ್ಮೆ ಉಂಟುಮಾಡಿಕೊಳ್ಳುವ ಪರಿಕರಗಳನ್ನು ಪಡೆದುಕೊಳ್ಳುತ್ತಲೇ ತನ್ನ ಬದುಕನ್ನು ಓದುಗನ ಮಡಿಲಿಗೆ ಒಡ್ಡುವುದಕ್ಕೆ ಸಜ್ಜಾಗುವ ಪ್ರಕ್ರಿಯೆ’ನೇರಳೆ ಮರ’ ಕೃತಿಯಲ್ಲಿ ಕಾಣುವಂತದ್ದಾಗಿದೆ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books