‘ಮಧುರಂಜಿನಿ’ ಶಾನ್ ಕಾಸರಗೋಡು ಅವರ ಸುದೀರ್ಘ ಕಾಲದ ಅನುಭವ, ಅನುಭಾವದಿಂದ ಮೈದಳೆದು ಬಂದ ವಿಷಯ ವೈವಿಧ್ಯ ಬರಹಗಳ ಸಂಕಲನ.
ಇಲ್ಲಿಯ ಬರೆಹಗಳು ಚಿಂತನೆಗೆ ಹಚ್ಚುತ್ತವೆ, ವಿಮರ್ಶೆ - ವ್ಯಾಖ್ಯಾನಗಳಿಗೆ ತೆರೆದುಕೊಳ್ಳುತ್ತವೆ. ಇದೊಂದು ಅಪೂರ್ವ ಆಕರ ಗ್ರಂಥವಾಗಿ ಸಲ್ಲುತ್ತದೆ. ತಾಂತ್ರಿಕ ಯುಗದಲ್ಲೂ ನಮ್ಮ ಉದಾತ್ತ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆಯುಂಟಾಗುತ್ತಿರುವ ಸಂದರ್ಭದಲ್ಲಿ ಇಂತಹ ಕೃತಿಗಳು ಜೀವ ಚೈತನ್ಯದ ಸೆಲೆಯಾಗಿ ಗಮನ ಸೆಳೆಯುತ್ತವೆ.
ಶಾನ್ ಕಾಸರಗೋಡು ಎಂದೇ ಜನಪ್ರಿಯರಾದ ಕಲಾವಿದ ಕೆ. ವಿಷ್ಣು ಶ್ಯಾನುಭೋಗ್, ವೈಶಿಷ್ಟ್ಯಪೂರ್ಣ, ವೈವಿಧ್ಯಮಯ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಬಹುಮುಖ ಪ್ರತಿಭೆಯ ಕಲಾವಿದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗರ ಪುತ್ರ ಶಾನ್, ಕಳೆದ ಮೂರು ದಶಕಗಳಿಂದ ಉತ್ತರ ಮಲಬಾರ್ ಗ್ರಾಮೀಣ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಸಂಗೀತ-ಚಿತ್ರ ಕಲೆಯಲ್ಲಿ ಆಸಕ್ತಿ ಇದೆ. ಕೂಡ್ಲು ಶ್ಯಾನುಭೋಗ ಮನೆತನದ ಹಿರಿಯ ತಲೆಮಾರಿನ ಸಾಧನೆ-ಕೃತಿಗಳು ಶಾನ್ ಅವರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದ್ದು ಗಮನಿಸಬಹುದು. ...
READ MORE