ಗಣಿನಾಡು ಕೆಜೆಎಫ್ ಬಾಹ್ಯ ಚಿತ್ರಣ ಈಗಾಗಲೇ ಎಲ್ಲರಿಗೂ ಪರಿಚಿತವಾಗಿದೆ. ಆದರೆ ಕೆಜೆಎಫ್‌ನ ಆಂತರಿಕ ಚಿತ್ರಣದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಿದೆ. ಲೇಖಕ ಆರ್. ಕೇಶವಮೂರ್ತಿ ಅವರು ಚಿನ್ನದ ಗಣಿ ಕೆಜೆಎಫ್‌ನ ನೈಜ ಚಿತ್ರಣವನ್ನು ಓದುಗರಿಗೆ ಬಂಗಾರದ ಮನುಷ್ಯರು ಪುಸ್ತಕರ ಮೂಲಕ ನೀಡಿದ್ದಾರೆ. ಗಣಿ ಕಾರ್ಮಿಕರ ಬದುಕು, ಕಷ್ಟ, ಕಾಪರ್ಣ್ಯಗಳ ಬಗ್ಗೆ ವಿವರಿಸಿದ್ದಾರೆ. ದೂರದಿಂದ ಸುಂದರವಾಗಿ ಕಾಣಿಸುವ ಊರುಗಳಿಗೆ ಕ್ರೂರ ಮುಖವು ಇರುತ್ತದೆ. ಗಣಿಯಿಂದ ತೆಗೆದು ಸೋಸಿ ಸುಟ್ಟಿದ್ದು ಚಿನ್ನವನ್ನಷ್ಟೆ ಅಲ್ಲ, ಬದುಕನ್ನು ಕೂಡ. ಹಾಗೆ ಸುಡಿಸಿಕೊಂಡವರ ಆತ್ಮಕತೆ ಇದು ಎನ್ನುವ ಜೋಗಿಯವರ ಮಾತಿನ ಆಂತರ್ಯವನ್ನು ಈ ಕೃತಿ ವಿವರಿಸುತ್ತದೆ.
©2025 Book Brahma Private Limited.