ಎಸ್‌.ಎಂ. ಪೆಜತ್ತಾಯರ ಕಾಗದದ ದೋಣಿ -2

Author : ಬಿ.ಆರ್. ಸತ್ಯನಾರಾಯಣ

Pages 296

₹ 180.00




Year of Publication: 2012
Published by: ದೇಸಿ ಪುಸ್ತಕ
Address: 121, 13ನೆ ಮುಖ್ಯರಸ್ತೆ, ಎಂ.ಸಿ. ಲೇಓಟ್‌, ವಿಜಯನಗರ, ಬೆಂಗಳೂರು-40
Phone: 9845096668

Synopsys

ಕೃಷಿಕ ಎಂ.ಎಸ್‌. ಪೆಜತ್ತಾಯರ ಅನುಭವ ಕಥನವನ್ನು ಬಿ.ಆರ್‌. ಸತ್ಯನಾರಾಯಣ ಅವರು ಎರಡು ಸಂಪುಟಗಳಲ್ಲಿ ಸಂಕಲಿಸಿದ್ದಾರೆ. ಇದು ಎರಡನೆಯ ಭಾಗ. ಕತೆಗಾರ ಅಬ್ದುಲ್ ರಶೀದ್ ಅವರು ಕಾಗದದ ದೋಣಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ.

ಕಾಗದದ ದೋಣಿಯಂತೆ ನನ್ನ ಬಾಳದೋಣಿಯೂ ಸಾಗಿತು! – ಅನ್ನುತ್ತಾರೆ ಅರುವತ್ತೈದರ ಎಸ್.ಎಂ. (ಕೇಸರಿ) ಪೆಜತ್ತಾಯ, ಉಡುಪಿಯ ಎಮ್.ಜಿ. ಎಮ್. ಕಾಲೇಜ್‌ನ ಸೈನ್ ವಿದ್ಯಾರ್ಥಿ, ಸೇರಲು ಯೋಜಿಸಿದ್ದು ಭಾರತೀಯ ನೌಕಾ ಪಡೆ, ಶ್ರೀ ಲಾಲ್ ಬಹದ್ದೂರರ ಪ್ರಭಾವದಿಂದ ಆಗಿದ್ದು ವೃತ್ತಿಪರ ರೈತ. ನಲವತ್ತೈದು ವರುಷಗಳ ವ್ಯವಸಾಯದ ಅನುಭವ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡಿನ ಕಾಫಿಕಾಡುಗಳಲ್ಲಿ ಅವಿರತ ದುಡಿತ, ಹವ್ಯಾಸಗಳು: ಚಾರಣ, ಪ್ರವಾಸ, ತುಂಬಿದ ನದಿಗಳಲ್ಲಿನ ಈಜು, ಬಂದೂಕು ಗುರಿಕಾರಿಕೆ, ಛಾಯಾಗ್ರಹಣ, ಓದು ಮತ್ತು ಅಂಚೆ ತೆರಪಿನ ಸ್ನಾತಕೋತ್ತರ ಓದು, ಐದು ವರುಷಗಳಿಂದ ಕೀಲಿಮಣೆ ಕುಟ್ಟುವ ಹವ್ಯಾಸ, ಜೀವನಾನುಭವವೇ ಪ್ರಧಾನವಾದ ಬರವಣಿಯ ಧಾಟಿ, ಈಗ ಸ್ವಯಂ ನಿವೃತ್ತಿಯ ಸೋಗಿನಲ್ಲಿ ಕಿರಿಯ ಮಗಳು ರಚನಾಳಿಗೆ ಕೃಷಿ ಕ್ಷೇತ್ರದ ಜವಾಬ್ದಾರಿ ಹೊರಿಸಿ ತನ್ನ ವ್ಯವಸಾಯದ ಕನಸುಗಳನ್ನು ಸಾಕಾರ ಮಾಡಲು ಹೊರಟಿರುವ ಉತ್ಸಾಹಿ.

About the Author

ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್‍. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...

READ MORE

Related Books