ಹರಪನಹಳ್ಳಿಯ ದರೋಡೆಕೋರರ ನಡುವೆ ನಡೆದ ಸ್ವಾರಸ್ಯಕರವಾದ ಘಟನೆಗಳನ್ನು ರೋಚಕವಾಗಿ ವಿವರಿಸಿದಂತಹ ಪುಸ್ತಕವಿದು. ತಮ್ಮ ಸಾಂಪ್ರದಾಯಿಕ ವಿವರಣೆಯ ಶೈಲಿಯನ್ನು ರವಿಬೆಳಗೆರೆಯವರು ಇಲ್ಲಿ ಕೂಡ ಮುಂದುವರೆಸಿದ್ದಾರೆ. ವಸ್ತು ವಿಷಯವನ್ನು ರೋಚಕವಾಗಿ ವಿವರಿಸಿ ಪುಸ್ತಕವನ್ನು ಒಂದೇ ಬಾರಿಗೆ ಓದಿ ಮುಗಿಸುವಂತೆ ನಿರೂಪಿಸಿದ್ದಾರೆ ಲೇಖಕರು. ದರೋಡೆಕೋರರ ನಡುವೆ ನಡೆದ ಗುಂಡಿನ ದಾಳಿ, ಆ ದಾಳಿಯಿಂದಾಗಿ ತಾವು ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳು ಮತ್ತು ಅವರಿಗೆ ಬೆನ್ನುಲುಬಾಗಿ ನಿಂತ ವ್ಯಕ್ತಿಗಳ ಕುರಿತಾದ ವಿಸ್ತೃತ ವಿವರಣೆ ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಪುಸ್ತಕವನ್ನು ರವಿ ಬೆಳಗೆರೆಯವರು ರೇವಣಸಿದ್ಧಯ್ಯನವರ ಜೊತೆಗೂಡಿ ಬರೆದಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ರೇವಣ ಸಿದ್ಧಯ್ಯನವರು ಯಾವ ರೀತಿ ಕೋರ್ಟಿನಲ್ಲಿ ಈ ಕೇಸ್‍ನ್ನು ಗೆದ್ದರು ಎಂಬ ಕುರಿತು ಅವರೇ ತಮ್ಮ ಪದಗಳಲ್ಲಿ ವಿವರಿಸಿದ್ದಾರೆ. ರವಿ ಬೆಳಗೆರೆಯವರ ವೃತ್ತಿ ಜೀವನದಲ್ಲಿ ಇರುವ ವೈಯಕ್ತಿಕ ದ್ವೇಷದ ಪ್ರತೀಕಾರವನ್ನು ತೀರಿಸಲು ಅವರ ವೈರಿಗಳು ಯಾವ ರೀತಿ ಸಂಚು ಮಾಡಿದ್ದರು ಎಂಬ ಕುರಿತು ಕೂಡ ಈ ಪುಸ್ತಕ ಮಾಹಿತಿ ನೀಡುತ್ತದೆ. ಅತ್ಯಂತ ಕುತೂಹಲಕಾರಿಯಾಗಿ ಈ ಪುಸ್ತಕ ಮೂಡಿ ಬಂದಿದೆ.
©2025 Book Brahma Private Limited.