ರಂಗಭೂಮಿಯಲ್ಲಿ ನಟಿಯಾಗಿ, ವಿನ್ಯಾಸಗಾರ್ತಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡ ಅಮೃತಾ ರಕ್ಷಿದಿ ಅವರ ಜೀವನಾನುಭವಗಳನ್ನು ಅವರ ಈ ಆತ್ಮಕತೆಯ ಅಮೃತಯಾನ ಸಂಪುಟದ 3 ನೇ ಭಾಗ ’ತನ್ನೊಳಗಿನ ಪ್ರಪಂಚ’. ತಮ್ಮ ಬಾಲ್ಯದ ದಿನಗಳಿಂದಲೇ ಪ್ಯಾರಾನಾಯ್ಡ್, ಸ್ಕಿಝೋಫ್ರೇನಿಯಾ ಎಂಬ ಖಾಯಿಲೆಗಳಿಂದ ಬಳಲುತ್ತಿದ್ದ ಲೇಖಕಿ ಅಮೃತಾ ಅವರ ’ಅಮೃತಯಾನ’ ಪುಸ್ತಕ ಸುಮಾರು ಐದು ಸಂಪುಟಗಳಲ್ಲಿ ಅವರ ಅನುಭವ ಕಥನವನ್ನು ದಾಖಲಿಸಿದೆ. ಲೇಖಕಿ ತಮ್ಮ ಬದುಕಿನ ಕಷ್ಟಸುಖಗಳಿಗೆ ಮುಖಾಮುಖಿಯಾಗುತ್ತಾ ತಮ್ಮ ಅನುಭವದ ಕಥನವನ್ನು ಓದುಗರೊಂದಿಗೆ ಹಂಚಿಕೊಂಡಿದ್ಧಾರೆ. ತಮ್ಮ ಬದುಕಿನೊಳಗಿನ ಕಲ್ಪನಾ ಬದುಕನ್ನು ಅನಾವರಣಗೊಳಿಸುವ ಈ ಲೇಖಕಿಯ ಬದುಕಿನ ಘಟ್ಟಗಳನ್ನು ಈ ಕೃತಿ ಹೇಳುತ್ತದೆ.
©2024 Book Brahma Private Limited.