ಲೇಖಕ ಮಿರ್ಜಾ ಬಷೀರ್ ಅವರ ಅನುಭವ ಕಥನ ಕೃತಿ ʻಗಂಗೆ ಬಾರೆ ಗೌರಿ ಬಾರೆʼ. ವೃತ್ತಿಯಲ್ಲಿ ಪಶುವೈದ್ಯರಾಗಿರುವ ಇವರು ತಮ್ಮ ದಿನನಿತ್ಯ ಬದುಕಿನಲ್ಲಿ ಮೂಕ ಪ್ರಾಣಿಗಳೊಂದಿಗೆ ನಡೆಯುವ ಮನಕಲಕುವ ಘಟನೆಗಳ ದಿನಚರಿಯನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎನ್. ಮೋಹನ್ ಅವರು, ಕನ್ನಡದ ಮಹತ್ವದ ಕಥೆಗಾರರಾದ ಡಾ ಮಿರ್ಜಾ ಬಷೀರ್ ಅವರು ಅಷ್ಟೇ ಜತನದಿಂದ ತಮ್ಮ ವ್ಯಕ್ತಿ ಬದುಕಿನ ಕಥನಗಳನ್ನು ಹೆಕ್ಕಿ ಕೊಟ್ಟಿದ್ದಾರೆ. ಇವು ಮೂಕಲೋಕದ ಮನಕಲಕುವ ಕಥೆಗಳು. ಪಶುವೈದ್ಯರಾದ ಮಿರ್ಜಾ ಬಷೀರ್ ಅವರು ತಮ್ಮ ವೃತ್ತಿಯನ್ನು ಎಂದೂ ಮುಗಿಯದ ಪಾಠವಾಗಿ ಸ್ವೀಕರಿಸಿದ ಕಾರಣ ಇಲ್ಲಿನ ಕಥನಗಳು ಮೂಕ ಪ್ರಾಣಿಗಳ ಆತ್ಮ ಚರಿತ್ರೆಯು ಹೌದೇನೋ ಎನ್ನುವಂತೆ ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. 'ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ..' ಎನ್ನುವ ಮಾತನ್ನು ಈ ಕೃತಿ ಮತ್ತೆ ಮತ್ತೆ ನಿಜ ಮಾಡಿ ತೋರಿಸುತ್ತಿದೆ ಎಂದು ಹೇಳಿದ್ಧಾರೆ.
©2025 Book Brahma Private Limited.