ಕೃಷಿಕ ಎಂ.ಎಸ್. ಪೆಜತ್ತಾಯರ ಅನುಭವ ಕಥನವನ್ನು ಬಿ.ಆರ್. ಸತ್ಯನಾರಾಯಣ ಅವರು ಎರಡು ಸಂಪುಟಗಳಲ್ಲಿ ಸಂಕಲಿಸಿದ್ದಾರೆ. ಇದು ಮೊದಲನೆಯ ಭಾಗ. ಕತೆಗಾರ ಅಬ್ದುಲ್ ರಶೀದ್ ಅವರು ಕಾಗದದ ದೋಣಿಯ ಬಗ್ಗೆ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ.
ಕಾಗದದ ದೋಣಿಯಂತೆ ನನ್ನ ಬಾಳದೋಣಿಯೂ ಸಾಗಿತು! – ಅನ್ನುತ್ತಾರೆ ಅರುವತ್ತೈದರ ಎಸ್.ಎಂ. (ಕೇಸರಿ) ಪೆಜತ್ತಾಯ, ಉಡುಪಿಯ ಎಮ್.ಜಿ. ಎಮ್. ಕಾಲೇಜ್‌ನ ಸೈನ್ ವಿದ್ಯಾರ್ಥಿ, ಸೇರಲು ಯೋಜಿಸಿದ್ದು ಭಾರತೀಯ ನೌಕಾ ಪಡೆ, ಶ್ರೀ ಲಾಲ್ ಬಹದ್ದೂರರ ಪ್ರಭಾವದಿಂದ ಆಗಿದ್ದು ವೃತ್ತಿಪರ ರೈತ. ನಲವತ್ತೈದು ವರುಷಗಳ ವ್ಯವಸಾಯದ ಅನುಭವ. ಕರಾವಳಿ, ಬಯಲು ಸೀಮೆ ಮತ್ತು ಮಲೆನಾಡಿನ ಕಾಫಿಕಾಡುಗಳಲ್ಲಿ ಅವಿರತ ದುಡಿತ, ಹವ್ಯಾಸಗಳು: ಚಾರಣ, ಪ್ರವಾಸ, ತುಂಬಿದ ನದಿಗಳಲ್ಲಿನ ಈಜು, ಬಂದೂಕು ಗುರಿಕಾರಿಕೆ, ಛಾಯಾಗ್ರಹಣ, ಓದು ಮತ್ತು ಅಂಚೆ ತೆರಪಿನ ಸ್ನಾತಕೋತ್ತರ ಓದು, ಐದು ವರುಷಗಳಿಂದ ಕೀಲಿಮಣೆ ಕುಟ್ಟುವ ಹವ್ಯಾಸ, ಜೀವನಾನುಭವವೇ ಪ್ರಧಾನವಾದ ಬರವಣಿಯ ಧಾಟಿ, ಈಗ ಸ್ವಯಂ ನಿವೃತ್ತಿಯ ಸೋಗಿನಲ್ಲಿ ಕಿರಿಯ ಮಗಳು ರಚನಾಳಿಗೆ ಕೃಷಿ ಕ್ಷೇತ್ರದ ಜವಾಬ್ದಾರಿ ಹೊರಿಸಿ ತನ್ನ ವ್ಯವಸಾಯದ ಕನಸುಗಳನ್ನು ಸಾಕಾರ ಮಾಡಲು ಹೊರಟಿರುವ ಉತ್ಸಾಹಿ.
©2024 Book Brahma Private Limited.