ಲೇಖಕಿ ಎಂ.ಆರ್. ಕಮಲ ಅವರ ‘ಕಾಳನಾಮ ಚರಿತ್ರೆ ’ಯ ಮುಂದುವರೆದ ಭಾಗವೇ-ಊರ ಬೀದಿಯ ಸುತ್ತು. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಕೇಶವ ಮಳಗಿ “ ಬದುಕಿನ ಸಮಸ್ಯೆಯಲ್ಲಿ ಸಿಲುಕಿ ಸೊರಗಿದಾಗ ಒಂದು ಹಾಡು, ಹಕ್ಕಿಯ ಕೂಗು, ಮಗುವಿನ ಅಳು, ಒಂದು ಸಾಂತ್ವನದ ನುಡಿ ಮತ್ತೆ ಜೀವಜಲ ಉಕ್ಕಿಸುವಂತೆ ಈ ಬರಹಗಳೂ ಬದುಕಿನ ಕುರಿತು ಹೊಸ ಭರವಸೆಯನ್ನು ಮೂಡಿಸಬಲ್ಲವು. ನಿತ್ಯಬದುಕಿನ ಜಂಜಡಗಳಲ್ಲಿ ನಿರ್ಲಕ್ಷಿಸಿ ಬಿಡಬಲ್ಲ ಸಣ್ಣಸಂಗತಿಗಳ ಹಿಂದೆ ಅಡಗಿರುವ ಸೊಬಗು, ಜೀವನಸೌಂದರ್ಯವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಮುಕ್ತವಾಗಿ ಸ್ವೀಕರಿಸಿ, ಮನಸ್ಸನ್ನು ಕಹಿಯಾಗಿಸಿಕೊಳ್ಳದೆ ನಿರರ್ಥಕವೆನ್ನುವುದರಲ್ಲಿ ಹಿರಿದಾದ ಅರ್ಥವನ್ನು, ಸಿಪ್ಪೆಯಲ್ಲಿ ಸತ್ವವನ್ನು ಹುಡುಕುವ ಪರಿಯಿಂದ ಈ ಹಗುರ ಹರಟೆಗಳು ಆಕರ್ಷಕವಾಗಿವೆ. ಗಾಳಿಯ ಲಘುತ್ವ, ಮುಗ್ಧತೆ ಮತ್ತು ಉಳಿದವರಿಗೆ ಸಂಕೀರ್ಣವಾಗಿ ಕಂಡದ್ದರಲ್ಲಿ ನಿಷ್ಕಪಟತೆಯನ್ನು ಅರಸುವ ಉತ್ಸಾಹ ಈ ಬರಹಗಳ ಹಿಂದಿದೆ. ವಿನೋದಪ್ರಜ್ಞೆ ವಸ್ತುಭಾರವಾಗದಂತೆ ವಹಿಸುವ ಎಚ್ಚರ, ಎಲ್ಲಕ್ಕಿಂತ ಮಿಗಿಲಾಗಿ ಒಣಬೌದ್ಧಿಕ ಕಸರತ್ತುಗಳಿಲ್ಲದ ನೇರವಂತಿಕೆ ಈ ಸಲ್ಲಾಪಗಳ ಗುಣಾತ್ಮಕತೆಯನ್ನು ಹೆಚ್ಚಿಸಿವೆ.” ಎಂದು ವಿಮರ್ಶಿಸಿದ್ದಾರೆ.
©2024 Book Brahma Private Limited.