ಶಾಲಾಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಅತ್ಯಂತ ಮುಖ್ಯವಾದ್ದದ್ದು. ವಿದ್ಯಾರ್ಥಿಯೊಬ್ಬನ ಹೈಸ್ಕೂಲು ಅವಧಿಯ ಮೂರು ವರ್ಷಗಳ ಅನುಭವ ಈ ಪುಸ್ತಕ. ಇತ್ತ ಆತ್ಮಚರಿತ್ರೆಯೂ ಅಲ್ಲದ, ಅತ್ತ ಕಾದಂಬರಿಯೂ ಅಲ್ಲದ ಈ ಕಥನ ಅತ್ಯಂತ ವಿಶಿಷ್ಟವಾಗಿದೆ. ಗ್ರಾಮೀಣಪ್ರದೇಶದ ಶಾಲೆ, ಪರಿಸರ, ಜನಮನ, ಮಠಗಳ ಒಳ-ಹೊರಗು, ಇತಿಹಾಸ, ದೈವಗಳ ಚರಿತ್ರೆ, ಮಾನವೀಯತೆಯೇ ಮೈವೆತ್ತಿದಂತಹ ಮುಖ್ಯೋಪಧ್ಯಾಯರು, ಉಢಾಪೆಯ ಉಪಾಧ್ಯಾಯ ಸಮೂಹ, ಹಾಸ್ಟೆಲ್ ಜೀವನ, ಬಹುತ್ವದ ಬದುಕು ಎಲ್ಲವೂ, ಹೈಸ್ಖುಲು ವಿದ್ಯಾಭ್ಯಾಸದ ಸುಮಾರು ೨೦ ವರ್ಷಗಳ ನಂತರ ಲೇಖಕರಿಂದ ಬರೆಯಿಸಿಕೊಂಡಿವೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE