ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕೃತಿ-ಕಾಲೇಜು ರಂಗ. ವ್ಯಂಗ್ಯ ದೃಷ್ಟಿಯ ಅನುಭವ ಕಥನಗಳ ಸಂಕಲನವಿದು. ವ್ಯಕ್ತಿಯು ಇಷ್ಟ ಪಡದ ಹುದ್ದೆಗೆ ಸೇರಿ ನ್ಯಾಯ-ಅನ್ಯಾಯಗಳ ಅನುಭವ ಪಡೆದು ನಂತರ ಆ ಹುದ್ದೆ ತೊರೆಯುವುದು ಇಲ್ಲಿಯ ಕಥಾ ವಸ್ತು. ಮಧ್ಯೆ ಮಧ್ಯೆ, ದಾಸರ ಪದಗಳ ಸಾಲುಗಳನ್ನು ಬಳಸಿದ್ದುಅಣಕು ಮಾತುಗಳಿಂದ ಬಳಸಿದ್ದು, ಇಡೀ ಕಥೆಗೆ ಉತ್ತಮ ಚಾಲನೆ ಸಿಕ್ಕಿದೆ. ಓದುಗರನ್ನು ಕೊನೆಯವರೆಗೂ ಸೆಳೆದು ಕೊಂಡು ಹೋಗುತ್ತದೆ. ಬಿ.ವಿ. ಮೂರ್ತಿ ಅವರ ವ್ಯಂಗ್ಯಚಿತ್ರಗಳು ಕೃತಿಯ ಪರಿಣಾಮಕತೆಯನ್ನು ಹೆಚ್ಚಿಸಿವೆ.
ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್. ಸ್ವಾಮಿ. `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...
READ MORE