‘ಅಂತರಾಳ’ ಲೇಖಕ, ಕತೆಗಾರ ಸರ್ಜಾಶಂಕರ್ ಹರಳಿಮಠ ಅವರ ಸಾಹಿತ್ಯ ಸಂಕಲನ. ವಿದ್ಯಾರ್ಥಿದೆಸೆಯಲ್ಲಿ ರಚಿಸಿದ ಈ ಕಾವ್ಯ ಸಂಕಲನಕ್ಕೆ ತುಂಗಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜೆ.ಕೆ. ರಮೇಶ ಅವರ ಬೆನ್ನುಡಿ ಬರಹವಿದೆ. ಸಾಹಿತ್ಯದ ಫಲವತ್ತಾದ ನೆಲ ತೀರ್ಥಹಳ್ಳಿಯಲ್ಲೀಗ ಮತ್ತೊಂದು ಮೊಳಕೆಯೊಡೆದಿದೆ. ಮೊಳಕೆಯಲ್ಲೇ ಬೆಳೆಯುವ ಪೈರು ಕಾಣುತ್ತಿದೆ. ಕಿರಿಯ ಮಿತ್ರ ಸರ್ಜಾಶಂಕರ್ ವಿದ್ಯಾರ್ಥಿದೆಸೆಯಲ್ಲಿಯೇ ಅನೇಕ ಕಿರುಲೇಖನ, ವ್ಯಂಗ್ಯಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ಕಥೆಗಳನ್ನು ಬಾನುಲಿಯಿಂದ ಬಿತ್ತರಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ ಎಂದು ರಮೇಶ ಅವರು ಮೆಚ್ಚುಗೆ ಸೂಚಿಸಿದ್ದಾರೆ.
©2025 Book Brahma Private Limited.