‘ಕಲಿವ ಶಾಲೆಯ ಹಲವು ಮುಖಗಳು’ ಎಸ್.ವಿ. ಮಂಜುನಾಥ್ ಅವರ ಕೃತಿಯಾಗಿದೆ. ಇದಕ್ಕೆ ಎಚ್. ಎಸ್. ವೆಂಕಟೇಶಮೂರ್ತಿಯವರ ಬೆನ್ನುಡಿ ಬರಹವಿದೆ; 'ಕಲಿವ ಶಾಲೆಯ ಹಲವು ಮುಖಗಳು'- ಸ್ವಾನುಭವ, ಸಂಶೋಧನೆ, ನಿಸ್ವಾರ್ಥ ಆಸಕ್ತಿಯಿಂದ ಅವರು ರಚಿಸಿರುವ ಮಹತ್ವದ ಕೃತಿ ಇದು. ಶಿಕ್ಷಣ ಕ್ಷೇತ್ರದ ನಾನಾ ಮುಖಗಳನ್ನು, ಸರ್ಕಾರಿ ಶಾಲೆಗಳ ಪುರೋಭಿವೃದ್ಧಿಯನ್ನು, ಅವಕಾಶವಂಚಿತ ಮಕ್ಕಳ ಹಿತಾಸಕ್ತಿಯ ನೆಲೆಯಲ್ಲಿ ಚಿಂತಿಸುವ, ಸುಭಗ ಕನ್ನಡದಲ್ಲಿ ರಚಿತವಾದ ಇಂಥ ಪುಸ್ತಕವನ್ನು ಈಚಿನ ದಿನಗಳಲ್ಲಿ ನಾನು ಕಂಡಿರಲಿಲ್ಲ. ನಮ್ಮ ಸರ್ಕಾರಿ ಆರಂಭಿಕ ಕಲಿಕಾ ಕೇಂದ್ರಗಳಿಗೆ ಕೇರಳ ಮಾದರಿಯ ಪರ್ಯಾಯದ ಸೂಚನೆ ಸೂಕ್ತವೆನಿಸಿತು. ತಮ್ಮ ಅನುಭವಗಳನ್ನು ಹಾಗೂ ಅರಿವನ್ನು ಹೀಗೆ ಕನ್ನಡದಲ್ಲಿ ಸೃಷ್ಟಿಸುವ ಕೃತಿಗಳು ಇವತ್ತಿನ ತುರ್ತು ಅಗತ್ಯಗಳಾಗಿವೆ.
©2025 Book Brahma Private Limited.