'ನಕ್ಷತ್ರಲೋಕ,' 'ಮಾನವ ಚಂದ್ರನ ಮೇಲೆ,' 'ವೇಗ,' 'ವಿಜ್ಞಾನ ನಿರ್ಮಾಪಕರು' ಮುಂತಾದ ವಿಜ್ಞಾನ ಗ್ರಂಥಗಳನ್ನೂ ಹಲವಾರು ಜನಪ್ರಿಯ ವಿಜ್ಞಾನ ಲೇಖನಗಳನ್ನೂ ಬರೆದು ಓದುಗರಿಗೆ ಪರಿಚಿತರಾಗಿರುವ ಜಿ. ಟಿ. ನಾರಾಯಣರಾಯರು ಎನ್ ಸಿಸಿಯಂತಹ ವಿದ್ಯಾರ್ಥಿ ಜೀವನದ ಬಗ್ಗೆಯೂ ಬರೆದಿರುವುದು ವಿಶೇಷ.
ಆಲೀವ್ ಹಸಿರಿನ ಸಮವಸ್ತ್ರ ತೊಟ್ಟು ಸೇನಾನಿಯಂತೆ ಕನಸು ಕಾಣುತ್ತ ಶಿಸ್ತಾಗಿ ಹೆಜ್ಜೆ ಇರಿಸುವ ಎನ್‌ಸಿಸಿಯಂತಹ ವಿಶಿಷ್ಟ ಸಂಘಟನೆಯನ್ನು ತಮ್ಮದೇ ಬದುಕಿನ ಸ್ವಾರಸ್ಯಕರ ಸಂಗತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.
ಎನ್‌ಸಿಸಿ ಸಾಹಸಿಗರನ್ನೂ ರೂಪಿಸುತ್ತದೆ. ಜಿ.ಟಿ ನಾರಾಯಣರಾವ್ ಅಂತಹ ಸಾಹಸಿ. ಸಾಹಿತ್ಯದಲ್ಲೂ, ಬದುಕಿನ ರೀತಿಯಲ್ಲೂ ಅವರ ಸಾಹಸಗಳು ದೃಗ್ಗೋಚರವಾಗುವಂತಿವೆ. ಆ ಸಾಹಸ ಅವರ ಮುಂದಿನ ತಲೆಮಾರಿಗೂ ದಾಟಿರುವುದು ವಿಶೇಷ. ಅದೇನೇ ಇರಲಿ ವಿದ್ಯಾರ್ಥಿಗಳಲ್ಲಿ ಯುವಕರಲ್ಲಿ ಚಿಮ್ಮು ಉತ್ಸಾಹ ರೂಪಿಸುವ ಕೃತಿ ಸಂಗ್ರಹ ಯೋಗ್ಯ.
©2024 Book Brahma Private Limited.