ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅವರ ಅನುಭವ ಕಥನ ‘ಬುತ್ತಿ’ ಬಾಲ್ಯದ ಅನುಭವ ಕಥನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ವಿ ನಾರಾಯಣ ಅವರು, ‘ಅಮರೇಶ್ ನೆನಪು ಮತ್ತು ಅನುಭವಗಳನ್ನು ಬುದ್ಧಿ ಮತ್ತು ತರ್ಕಗಳ ಚೌಕಟ್ಟಿಗೆ ಒಗ್ಗಿಸದೇ ಕಾಪಿಡುವುದನ್ನು ಬಲು ನಿಕಟವಾಗಿ ಬಲ್ಲೆ ಎನ್ನುತ್ತಾರೆ. ಅವರ ಈ ಚಹರೆ ಹಲವು ಬಾರಿ ಅಚ್ಚರಿ ತಂದಿದ್ದು, ಇಲ್ಲಿನ ಬರಹಗಳಲ್ಲಿ ತಮ್ಮ ಆ ಚಹರೆಯ ಬಗೆಗೆ ಅವರೇ ಎಚ್ಚರಗೊಂಡಂತೆ ತೋರುತ್ತಿದೆ. ’ ಬುತ್ತಿ’ ಎಂಬುದು ಎಂದೋ ಎಲ್ಲೋ ಮಾಡಿದ ತಿನಿಸು. ಆ ವಿಚಾರವನ್ನೇ ಇಲ್ಲಿ ಕೇಂದ್ರೀಕರಿಸಿದ್ದಾರೆ. ನೆನಪುಗಳನ್ನು ಮಂಡಿಸುವಾಗ ಇಂದಿನ ಬೇಕುಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆಯೋ ಇಲ್ಲವೇ ಆ ನೆನಪುಗಳ ಬೇರುಗಳಾಗಿರುವ ಅನುಭವಗಳನ್ನು ಮತ್ತೆ ಕಟ್ಟಿಕೊಳ್ಳುವ ಇರಾದೆಯನ್ನು ಹೊಂದಿರುತ್ತದೆಯೋ ಎಂಬುದನ್ನು ಬರೆಯುವುದು ಒಂದು ಸಮಸ್ಯೆ. ಅಮರೇಶ ಇಲ್ಲಿನ ಬರಹಗಳಲ್ಲಿ ಆ ಎರಡೂ ಹಾದಿಗಳ ನಡುವೆ ಇದ್ದೇನೆ ಎಂಬ ಎಚ್ಚರವನ್ನು ತಿಳಿಸುತ್ತಾರೆ. ಈ ಬರಹದಲ್ಲಿ ಆ ದಾರಿಯು ಸಮರ್ಪಕವಾಗಿ ಕಾಣಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.